ಸಿದ್ದರಾಮಯ್ಯಂಗೆ ದುಡ್ಡು ಹಾಗೂ ಅಧಿಕಾರದ ದರ್ಪ ಜಾಸ್ತಿಯಾಗಿದೆ : HDK

ಯಾದಗಿರಿ : ಕಾಂಗ್ರೆಸ್‌ಗೆ ಮತಹಾಕಿ ಎಂದು ಮಾತೆ ಮಹಾದೇವಿ ಹೇಳಿರುವ ವಿಚಾರ ಸಂಬಂಧ ಮಾಜಿ ಸಿಎಂ ಎಚ್‌.ಡಿ ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದು, ಮಹಾದೇವಿ ಅವರ ವ್ಯಯಕ್ತಿಕ ನಿಲುವು ತಿಳಿಸಿದ್ದಾರೆ, ಜೆಡಿಎಸ್ ಪಕ್ಷ ಬಿಟ್ಟು ಹೋದವರನ್ನ ಉಳಿಸಿಕೊಳ್ಳಲು ನನ್ನ ಹತ್ತಿರ ದುಡ್ಡು ಇಲ್ಲ ಹಾಗೂ ಅಧಿಕಾರವೂ ಇಲ್ಲ ಎಂದಿದ್ದಾರೆ.
ಸಿಎಂ ಸಿದ್ದರಾಮಯ್ಯ ಅವರು ದುಡ್ಡಿನ ಹಾಗೂ ಅಧಿಕಾರದ ದರ್ಪದಲ್ಲಿದ್ದಾರೆ, ಸಿಎಂ ಸಿದ್ದರಾಮಯ್ಯ ರಾಮನಗರಕ್ಕೆ ಬಂದು ನನ್ನ ವಿರುದ್ದ ಒಂದು ವಾರ ಪ್ರಚಾರ ಮಾಡಲಿ, ಎಷ್ಟೇ ಪ್ರಚಾರ ಮಾಡಿದ್ರು ನನ್ನನ್ನು ರಾಮನಗರದಲ್ಲಿ ಸೋಲಿಸಲು ಸಾಧ್ಯವಿಲ್ಲ ಎಂದಿದ್ದಾರೆ.
ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ, ಜೆಡಿಎಸ್ ಪಕ್ಷ ಸ್ಪಷ್ಟ ನಿಲುವು ತಾಳಬೇಕೆಂಬ ಹೇಳಿಕೆ ವಿಚಾರ ಸಂಬಂಧ ಪ್ರತಿಕ್ರಿಯಿಸಿದ್ದು, ಜೆಡಿಎಸ್ ಪಕ್ಷದ ಬಗ್ಗೆ ಮಾತನಾಡಲು ಅವರು ಯಾರು?, ರಾಹುಲ್ ಮೊದಲು‌ ಕಾಂಗ್ರೆಸ್ ನಡೆ ತಿಳಿಸಲಿ ಎಂದಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com