ಯಾರನ್ನೋ ಮುಗಿಸಿ ರಾಜಕಾರಣ ಮಾಡುವ ಅಗತ್ಯ ನನಗಿಲ್ಲ : ಬೇಳೂರು ಗೋಪಾಲಕೃಷ್ಣ

ಶಿವಮೊಗ್ಗ : ಸಾಗರ ಬಿಜೆಪಿ ಟಿಕೆಟ್ ಹಂಚಿಕೆ ಗೊಂದಲ ವಿಚಾರವಾಗಿ ಬೇಳೂರು ಗೋಪಾಲಕೃಷ್ಣ  ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ್ದಾರೆ.

ನಾನು ಯಾರ ನಗುವನ್ನೂ ಕಿತ್ತುಕೊಂಡಿಲ್ಲ. ಯಾರಾದರೂ ಹಾಳಾಗಲಿ ನನಗೇನು ಎಂಬ ಭಾವನೆ ನನಗಿಲ್ಲ. ಆದರೆ ಅವರೇ ನನ್ನ ನಗುವನ್ನು ಕಿತ್ತುಕೊಂಡಿದ್ದಾರೆ. ನಾನು ಸಿಗಂದೂರು ಚೌಡೇಶ್ವರಿಯ ಪ್ರಸಾದ ಸ್ವೀಕರಿಸಿ ಆಣೆ ಮಾಡಲು ಸಿದ್ದನಿದ್ದೇನೆ. ಯಾರನ್ನೂ ಮುಗಿಸಿ ನಾನು ರಾಜಕಾರಣ ಮಾಡುವ ಅಗತ್ಯವಿಲ್ಲ. ನನಗೆ ನನ್ನದೇ ಆದ ಶಕ್ತಿ ಇದೆ. ಯಾರೋ ಮಾಡಿರುವ ಆರೋಪಕ್ಕೆ  ನಾನು ಉತ್ತರಿಸುವ ಅಗತ್ಯವಿಲ್ಲ ಎಂದು ಪರೋಕ್ಷವಾಗಿ ಹರತಾಳು ಹಾಲಪ್ಪ ಅವರಿಗೆ ಟಾಂಗ್ ನೀಡಿದ್ದಾರೆ.

ಎಲ್ಲಾ ಪ್ರಶ್ನೆಗಳಿಗೂ ಜನ ಉತ್ತರ ನೀಡುತ್ತಾರ. ನನ್ನ ಕ್ಷೇತ್ರದಲ್ಲಿ ಟಿಕೆಟ್‌ ಕೇಳುವುದು ನನ್ನ ಹಕ್ಕು. ಪಕ್ಷದ ತೀರ್ಮಾನಕ್ಕೆ ನಾನು ಸದಾ ಬದ್ದನಾಗಿರುತ್ತೇನೆ ಎಂದಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com