ಸೀಮಿತ ಓವರ್ ಕ್ರಿಕೆಟ್ ನಲ್ಲಿ ಬುಮ್ರಾ ವಿಶ್ವದ ನಂ.1 ಬೌಲರ್ : ಶೇನ್ ಬಾಂಡ್

ನ್ಯೂಜಿಲೆಂಡ್ ಕ್ರಿಕೆಟ್ ತಂಡದ ಮಾಜಿ ವೇಗದ ಬೌಲರ್ ಶೇನ್ ಬಾಂಡ್ ಟೀಮ್ ಇಂಡಿಯಾ ವೇಗಿ ಜಸ್ಪ್ರೀತ್ ಬುಮ್ರಾ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ‘ ಸೀಮಿತ ಓವರ್ ಮಾದರಿಯ ಕ್ರಿಕೆಟ್ ನಲ್ಲಿ ಜಸ್ಪ್ರೀತ್ ಬುಮ್ರಾ ವಿಶ್ವದ ನಂ.1 ಬೌಲರ್ ಆಗಿದ್ದಾರೆ, ಜಾಗತಿಕ ಕ್ರಿಕೆಟ್ ನಲ್ಲಿ ನೀವು ಯಾರನ್ನೇ ಕೇಳಿ ನೋಡಿ, ಅವರು ಜಸ್ಪ್ರೀತ್ ಬುಮ್ರಾರನ್ನು ಟಾಪ್ ನಲ್ಲಿಯೇ ಪರಿಗಣಿಸುತ್ತಾರೆ ‘ ಎಂದು ಶೇನ್ ಬಾಂಡ್ ಹೇಳಿದ್ದಾರೆ.

ಮುಂಬೈ ಇಂಡಿಯನ್ಸ್ ತಂಡದ ಬೌಲಿಂಗ್ ಕೋಚ್ ಆಗಿರುವ ಶೇನ್ ಬಾಂಡ್ ‘ ಪ್ರತಿಯೊಂದು ತಂಡವು ಅಂತಿಮ ಓವರ್ ಗಳಲ್ಲಿ ಬೌಲ್ ಮಾಡಲು ಉತ್ತಮ ಬೌಲರ್ ನನ್ನು ಹುಡುಕಾಡುತ್ತಿದೆ. ಕೊನೆಯ ಓವರ್ ಗಳಲ್ಲಿ ಬೌಲ್ ಮಾಡಲು ಜಸ್ಪ್ರೀತ್ ಬುಮ್ರಾಗಿಂತ ಉತ್ತಮ ಆಯ್ಕೆಯಿಲ್ಲ ‘ ಎಂದಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com