ನಾನು ಜೈನ ಧರ್ಮದವನಲ್ಲ, ನಾನೊಬ್ಬ ಹಿಂದೂ ವೈಷ್ಣವ : ಅಮಿತ್ ಶಾ

ಮುಂಬೈ : ಅಮಿತ್ ಶಾ ಒಬ್ಬ ಜೈನ ಹಿಂದೂವಲ್ಲ ಎಂಬ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಶಾ ತಿರುಗೇಟು ನೀಡಿದ್ದು, ನಾನು ಜೈನ ಧರ್ಮಕ್ಕೆ ಸೇರಿದವನಲ್ಲ, ನಾನೊಬ್ಬ ಹಿಂದೂ ವೈಷ್ಣವ ಎಂದಿದ್ದಾರೆ.
ಮುಂಬೈನಲ್ಲಿ ನಡೆದ ಬಿಜೆಪಿಯ ಸಂಸ್ಥಾಪನಾ ದಿನದ ಸಮಾರಂಭದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಹಿಂದೂ ಹೌದೋ ಅಲ್ಲವೋ ಎಂಬುದನ್ನು ಮೊದಲು ಸ್ಪಷ್ಟಪಡಿಸಲಿ ಎಂದಿದ್ದಾರೆ. ಅಲ್ಲದೆ ಜೈನ ಪ್ರತ್ಯೇಕ ಧರ್ಮ. ನನ್ನ ಬಗ್ಗೆ ಅವರು ಹೇಗೆ ಮಾತನಾಡಲು ಸಾಧ್ಯ. ನಾನು ಜೈನನಲ್ಲ ಹಿಂದೂ ವೈಷ್ಣವ ಎಂದಿದ್ದಾರೆ.
ಇದೇ ಸಂದರ್ಭದಲ್ಲಿ ಲಿಂಗಾಯಿತ ಪ್ರತ್ಯೇಕ ಧರ್ಮ ವಿಚಾರವಾಗಿ ಮಾತನಾಡಿದ ಅವರು, ಕರ್ನಾಟದ ಹಿಂದೂಗಳನ್ನು ಸಿದ್ದರಾಮಯ್ಯ ವಿಭಜನೆ ಮಾಡುತ್ತಿದ್ದಾರೆ. ಇದು ಕೇವಲ ಚುನಾವಣೆಯ ತಂತ್ರ ಎಂದಿದ್ದಾರೆ.

Leave a Reply

Your email address will not be published.