ದೇಶದ ಅತೀ ಎತ್ತರದ ಏಕಶಿಲಾ ಹನುಮನ ವಿಗ್ರಹಕ್ಕೆ ಎದುರಾಯ್ತು ಮತ್ತೊಂದು ವಿಘ್ನ

ಕೋಲಾರ : ದೇಶದಲ್ಲೇ ಅತ್ಯಂತ ಎತ್ತರದ ಏಕಶಿಲಾ ವಿಗ್ರಹದ ಸ್ಥಳಾಂತರ ಕೆಲಸಕ್ಕೆ ವಿಘ್ನಗಳು ಉಂಟಾಗುತ್ತಲೇ ಇವೆ. ಕೋಲಾರದ‌ ನರಸಾಪುರದ ಬಳಿ ಕೆತ್ತಲಾದ 62 ಅಡಿ ಉದ್ದ, 750 ಟನ್ ತೂಕದ ದ ಏಕ‌ಶಿಲೆ ವಿಗ್ರಹವನ್ನು ಬೆಂಗಳೂರಿನ ಸರ್ವಜ್ಞ ನಗರ ಕ್ಷೇತ್ರದ ಕಾಚರಕನಹಳ್ಳಿಯ ಬಳಿ ಪ್ರತಿಷ್ಠಾಪನೆಗೆ ತರುತ್ತಿದ್ದ ವೇಳೆ‌ ಈ ಮೊದಲು ನೀತಿ ಸಂಹಿತೆ ನೆಪದಲ್ಲಿ ಪೊಲೀಸರು ನಗರ ಪ್ರವೇಶಕ್ಕೆ ಅನುಮತಿ ನೀಡಿರಲಿಲ್ಲ.

ಬಳಿಕ ಎಲ್ಲವನ್ನು ಪರಿಶೀಲಿಸಿ  ನಗರ ಪ್ರವೇಶಕ್ಕೆ ಅನುಮತಿ ನೀಡಲಾಗಿತ್ತು.  ಇದಾದ ಬಳಿಕ ನಗರ ಪ್ರವೇಶಿಸಿದ್ದ ಟ್ರಕ್ ವಿಗ್ರಹದ ತೂಕ ತಾಳಲಾರದೆ‌ ಬೆಂಗಳೂರು ಉತ್ತರ ತಾಲ್ಲೂಕಿನ ಕಣ್ಣೂರು ಮಾರ್ಗವಾಗಿ ಬರುತ್ತಿದ್ದ ವೇಳೆ ರಸ್ತೆ ಮಧ್ಯೆ ಟ್ರಕ್ ನ ಹಿಂಬದಿ ಚಕ್ರಗಳು ಹೂತು ಹೋಗಿವೆ. ಅದೃಷ್ಟವಶಾತ್ ಈ ಸಮಯದಲ್ಲಿ ಅಕ್ಕಪಕ್ಕದಲ್ಲಿ ಯಾವುದೇ ವಾಹನಗಳು ಇಲ್ಲದಿದ್ದರಿಂದ ಯಾವುದೇ ಅವಘಡ‌ ಸಂಭವಿಸಿಲ್ಲ. ಒಟ್ಟು 8 ಚಕ್ರಗಳು ಹೂತು ಹೋಗಿದ್ದು ಜೆಸಿಬಿ ಬಳಸಿ ಮೇಲಕ್ಕೆತ್ತುವ ಕೆಲಸ ಬರದಿಂದ ಸಾಗುತ್ತಿದೆ. ಈ ಘಟನೆಯಿಂದಾಗಿ ವಿಮಾನ ನಿಲ್ದಾಣದಿಂದ ಬೆಂಗಳೂರಿನತ್ತ ತೆರಳುವ ಪರ್ಯಾಯ ರಸ್ತೆಯಲ್ಲಿ ಭಾರೀ ಟ್ರಾಫಿಕ್ ಜಾಮ್ ಉಂಟಾಗಿದೆ.

Leave a Reply

Your email address will not be published.

Social Media Auto Publish Powered By : XYZScripts.com