ಶೂಟಿಂಗ್ ಸೆಟ್‌ನಿಂದ ಸನ್‌ ಗ್ಲಾಸ್‌ ಕದ್ದು ತಂದ ರಾಧಿಕಾ ಪಂಡಿತ್‌…!!

ಕನ್ನಡದ ನಟಿ ರಾಧಿಕಾ ಪಂಡಿತ್‌ ಕುರಿತು ಸೋಶಿಯಲ್‌ ಮೀಡಿಯಾದಲ್ಲಿ ಭಾರೀ ಚರ್ಚೆ ನಡೆಯುತ್ತಿದೆ. ಇತ್ತೀಚೆಗಷ್ಟೇ ರಾಧಿಕಾ, ಕೂಲಿಂಗ್‌ ಗ್ಲಾಸ್‌ ಒಂದನ್ನು ಶೂಟಿಂಗ್‌ ಸೆಟ್‌ನಿಂದ ಕದ್ದು ತಂದಿದ್ದಾರಂತೆ.


ಹೌದು, ಯಶ್‌ ಅಭಿನಯಿಸುತ್ತಿರುವ ಕೆಜಿಎಫ್‌ ಶೂಟಿಂಗ್‌ ಸೆಟ್‌ಗೆ ರಾಧಿಕಾ ಹೋಗಿದ್ದರು. ಆಗ ಅಲ್ಲಿ ಹಳದಿ ಬಣ್ಣದ ಕೂಲಿಂಗ್‌ ಗ್ಲಾಸ್‌ ರಾಧಿಕಾ ಕಣ್ಣಿಗೆ ಬಿದ್ದಿತ್ತು. ಅದನ್ನು ಯಾರಿಗೂ ತಿಳಿಯದಂತೆ ತೆಗೆದುಕೊಂಡು ಬಂದಿದ್ದರು. ಬಳಿಕ ಅದನ್ನು ಹಾಕಿಕೊಂಡು ಫೋಟೋ ತೆಗೆಸಿಕೊಂಡಿದ್ದು, ಫೇಸ್‌ಬುಕ್‌ನಲ್ಲಿ ಅಪ್ಲೋಡ್ ಮಾಡಿ, ಯಾರಿಗೂ ತಿಳಿಯದಂತೆ ಇದನ್ನು ತಂದಿದ್ದೇನೆ ಎಂದು ಸ್ಟೇಟಸ್ ಹಾಕಿದ್ದಾರೆ.
ಇದರಿಂದಾಗಿ ರಾಧಿಕಾ ಸೋಶಿಯಲ್‌ ಮೀಡಿಯಾದಲ್ಲಿ ಸದ್ದು ಮಾಡುತ್ತಿದ್ದು, ಸನ್‌ ಗ್ಲಾಸ್‌ ತೆಗೆದುಕೊಂಡಿರುವ ವಿಚಾರವೇ ಸುದ್ದಿಯಾಗುತ್ತಿದೆ.

Leave a Reply

Your email address will not be published.