ಸಲ್ಮಾನ್‌ ಖಾನ್‌ಗೆ ಶಿಕ್ಷೆ ನೀಡಿದ್ದ ನ್ಯಾಯಾಧೀಶರು ಸೇರಿದಂತೆ 87 ಜಡ್ಜ್‌ಗಳ ವರ್ಗಾವಣೆ !!

ಜೋಧ್‌ಪುರ : ಕೃಷ್ಣಮೃಗ ಬೇಟೆ ಪ್ರಕರಣದಲ್ಲಿ ಸಲ್ಮಾನ್‌ ಖಾನ್‌ ವಿರುದ್ದ ತೀರ್ಪು ನೀಡಿದ್ದ ಜೋಧ್‌ಪುರ ನ್ಯಾಯಾಲಯದ ನ್ಯಾಯಾಧೀಶರು ಸೇರಿದಂತೆ ಅನೇಕ ಮಂದಿ ನ್ಯಾಯಾಧೀಶರನ್ನು ವರ್ಗಾವಣೆ ಮಾಡಲಾಗಿದೆ.
ನ್ಯಾಯಾಧೀಶರ ವರ್ಗಾವಣೆಯಾದ ಹಿನ್ನೆಲೆಯಲ್ಲಿ ಸಲ್ಮಾನ್‌ಗೆ ಇಂದೂ ಜಾಮೀನು ಸಿಗುವುದು ಕಷ್ಟ ಎಂಬಂತಾಗಿದೆ. ನ್ಯಾಯಾಂಗ ವ್ಯವಸ್ಥೆಯಲ್ಲಿ ಮಹ್ತರ ಬದಲಾವಣೆಗಳನ್ನು ತಂದ ಹಿನ್ನೆಲೆಯಲ್ಲಿ ನ್ಯಾಯಾಧೀಶರನ್ನು ವರ್ಗಾವಣೆಗೊಳಿಸಿರುವುದಾಗಿ ಮೂಲಗಳು ತಿಳಿಸಿವೆ. ರಾಜಸ್ಥಾನ ಹೈಕೋರ್ಟ್‌ ಆದೇಶದಂತೆ ಒಟ್ಟು 87 ಅಧಿಕಾರಿಗಳನ್ನು ವರ್ಗಾಯಿಸಲಾಗಿದೆ.
ಆದ ಕಾರಣ ಇನ್ನು ಮುಂದೆ ಸಲ್ಮಾನ್‌ ಖಾನ್‌ ಅವರ ಪ್ರಕರಣವನ್ನು ಜೋಧ್‌ಪುರದ ಸೆಷನ್ಸ್‌ ಕೋರ್ಟ್‌ನ ನ್ಯಾಯಾಧೀಶರಾಗಿ ವರ್ಗಾವಣೆಯಾಗಿರುವ ರವೀಂದ್ರ ಕುಮಾರ್‌ ಅವರು ಕೈಗೆತ್ತಿಕೊಳ್ಳಲಿದ್ದಾರೆ.
 ಇಂದು ಸಲ್ಮಾನ್‌ ಖಾನ್‌ ಜಾಮೀನು ಅರ್ಜಿಯ ವಿಚಾರಣೆ ನಡೆಯುವ ಹಿನ್ನೆಲೆಯಲ್ಲಿ ಈ ವರ್ಗಾವಣೆ ಮಹತ್ವದ ಪಾತ್ರ ವಹಿಸಿದ್ದು, ಸಲ್ಮಾನ್‌ಗೆ ಜಾಮೀನು ಸಿಗುತ್ತದಾ ಇಲ್ಲವಾ ಎಂಬುದು ಇಂದು ತಿಳಿಯಲಿದೆ.

Leave a Reply

Your email address will not be published.