ಪ್ರಧಾನಿ ನರೇಂದ್ರ ಮೋದಿ ದೇಶದ ಅತೀ ಭ್ರಷ್ಟ ವ್ಯಕ್ತಿ : ಜಿಗ್ನೇಶ್ ಮೇವಾನಿ

ಗುಜರಾತ್ ಶಾಸಕ ಜಿಗ್ನೇಶ್ ಮೇವಾನಿ ಕೊಪ್ಪಳದಲ್ಲಿ ಹೇಳಿಕೆ ನೀಡಿದ್ದಾರೆ ‘ ಗಂಗಾವತಿ ಮುಸ್ಲಿಂ-ಹಿಂದೂ ಧರ್ಮ ಸೌಹಾರ್ದತೆಯಿಂದ ಬಾಳುವ ನೆಲ. ಇಲ್ಲಿ ಅಮಿಶ್ ಶಾ, ಮೋದಿ ಬಂದು ಅಪವಿತ್ರಗೊಳಿಸುತ್ತಾರೆ. ಇಂತಹ ನೆಲದಲ್ಲಿ ಅವರನ್ನು ಬರಲು ಬಿಡಬೇಡಿ. ಇವತ್ತು ಸಂವಿಧಾನ ಅಪಾಯದಲ್ಲಿದೆ. ಕೋಮುವಾದಿ ಪಕ್ಷಗಳು ಕೇಂದ್ರ ಸೇರಿದಂತೆ ಹಲವು ರಾಜ್ಯಗಳಲ್ಲಿ ಆಡಳಿತ ಮಾಡ್ತಾ ಇವೆ. ಸಂವಿಧಾನಕ್ಕೆ ಅಳಿಸಲು ಮೋದಿ ಅಮಿತ್ ಷಾ ಕೆಲಸ ಇದ್ದಾರೆ ‘ ಎಂದಿದ್ದಾರೆ.

ಬಿಜೆಪಿ ಪಕ್ಷವನ್ನು ನಾವು ಅಧಿಕಾರಕ್ಕೆ ಬರಲು ಬಿಡಬಾರದು. ದೇಶದಲ್ಲಿ ಅತಿ ಭ್ರಷ್ಟ ಎಂದ್ರೆ ಅದು ಮೋದಿ. ಮೋದಿ ಹಣದಿಂದ ಕರ್ನಾಟಕದಲ್ಲಿ ಚುನಾವಣಾ ಮಾಡಲು ಹೊರಟಿದ್ದಾರೆ. ಈ ದೇಶದಲ್ಲಿ ಹಿಂದೂಗಳ ಅತಿ ವಿರೋಧಿ ಪಕ್ಷ ಅಂದ್ರೆ ಅದು ಬಿಜೆಪಿ.

‘ ನಿಮ್ಮದೆ ಸಂಘವಾರದ ನಿರುದ್ಯೋಗಿ ಯುವಕರಿಗೆ ಕೆಲಸ ಕೊಡೋಕೆ ಆಗ್ತಾ ಇಲ್ಲ. ನಿಮಗೆ 56 ಇಂಚಿನ ಎದೆ ಇದ್ರೆ ಮೊದಲು ನಿಮ್ಮ ಸಂಘಪರಿವಾರದ ಯುವಕರಿಗೆ ಕೆಲಸ ನೀಡಿ ‘

‘ ಪ್ರತಿ ವರ್ಷ ಎರಡು ಕೋಟಿ ನಿರುದ್ಯೋಗ ಸಮಸ್ಯೆ ಪರಿಹರಿಸ್ತೀನಿ ಅಂತ ಮೋದಿ ಹೇಳಿದ್ರು. ಆದ್ರೆ ಉದ್ಯೂಗ ನೀಡದ ಮೇಲೆ ನಿವು ಇಲ್ಲಿ ಇರೋದು ಸೂಕ್ತವಲ್ಲ. ಮೊದಲು ಹಿಮಾಲಯಕ್ಕೆ ನೀವು ಹೋಗಿ ‘

ಮೋದಿ ಹತ್ತಿರ ಎರಡು ಕೋಟಿ ನಿರುದ್ಯೋಗದ ಬಗ್ಗೆ ಮಾತನಾಡಿದ್ರೆ ಬಿಪಿ ಸುಗರ್ ಹೆಚ್ಚಾಗುತ್ತೆ. ಆರ್ ಎಸ್ ಎಸ್ ಗೂಂಡಾಗಳು ಬೀದಿಗಳು ನಮ್ಮನ್ನು ಹತ್ತಿಕ್ಕುತ್ತಿವೆ. ಜಾತಿ-ಧರ್ಮ ವಿಚಾರ ಇಟ್ಟುಕೊಂಡು ಬಿಜೆಪಿ ಚುನಾವಣಾ ಮಾಡುತ್ತೆ ‘ ಎಂದಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com