IPL 2018 : ಉದ್ಘಾಟನಾ ಸಮಾರಂಭ : ವಾಂಖೇಡೆಯಲ್ಲಿ ಮಿಂಚು ಹರಿಸಿದ ಸಿನಿ ತಾರೆಯರು

ಮುಂಬೈನ ವಾಂಖೇಡೆ ಮೈದಾನದಲ್ಲಿ ನಡೆದ ಉದ್ಘಾಟನಾ ಸಮಾರಂಭದ ಮೂಲಕ ಇಂಡಿಯನ್ ಪ್ರಿಮಿಯರ್ ಲೀಗ್  ಟೂರ್ನಿಗೆ ಅದ್ದೂರಿ ಚಾಲನೆ ದೊರೆಯಿತು. ಚೆನ್ನೈ ಹಾಗೂ ಮುಂಬೈ ಪಂದ್ಯಕ್ಕೂ ಮುನ್ನ ನಡೆದ ಸಮಾರಂಭದಲ್ಲಿ ಭಾಗವಹಿಸಿದ್ದ ಬಾಲಿವುಡ್ ತಾರೆಯರು ಹಾಡಿ, ಕುಣಿದು ನೆರೆದಿದ್ದ ಪ್ರೇಕ್ಷಕರನ್ನು ರಂಜಿಸಿದರು.

ಬಾಲಿವುಡ್ ನಟ ಹೃತಿಕ್ ರೋಶನ್, ಜಾಕ್ವೆಲಿನ್ ಫರ್ನಾಂಡಿಸ್, ಇಂಡಿಯನ್ ಮೈಕಲ್ ಜಾಕ್ಸನ್ ಎಂದೇ ಖ್ಯಾತಿಯಾದ ಪ್ರಭುದೇವಾ, ವರುಣ್ ಧವನ್, ಬಾಹುಬಲಿ ಖ್ಯಾತಿಯ ತಮನ್ನಾ ಭಾಟಿಯಾ, ಗಾಯಕ ಮಿಕಾ ಸಿಂಗ್ ಸಮಾರಂಭದಲ್ಲಿ ಭಾಗವಹಿಸಿದ್ದರು.

ಪ್ರಭುದೇವಾ, ಹೃತಿಕ್ ರೋಶನ್, ವರುಣ್ ಧವನ್, ತಮನ್ನಾ, ಜಾಕ್ವೆಲಿನ್ ತಮ್ಮ ನೃತ್ಯ ಪ್ರದರ್ಶನದ ಮೂಲಕ ಮೈದಾನದಲ್ಲಿ ಮಿಂಚು ಹರಿಸಿದರು. ಗಾಯಕ ಮಿಕಾ ಸಿಂಗ್ ತಮ್ಮ ಹಾಡುಗಳಿಂದ ಅಭಿಮಾನಿಗಳಿಗೆ ರಸದೌತಣ ನೀಡಿದರು.

Leave a Reply

Your email address will not be published.