CWG 2018 : ವೇಟ್ ಲಿಫ್ಟಿಂಗ್ : ಭಾರತಕ್ಕೆ 3ನೇ ಚಿನ್ನ ಗೆದ್ದುಕೊಟ್ಟ ಸತೀಶ್ ಕುಮಾರ್

ಆಸ್ಟ್ರೇಲಿಯಾದ ಗೋಲ್ಡ್ ಕೋಸ್ಟ್ ನಲ್ಲಿ ನಡೆಯುತ್ತಿರುವ 21ನೇ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಭಾರತಕ್ಕೆ ಮೂರನೇ ಚಿನ್ನದ ಪದಕ ದೊರೆತಿದೆ. ಶನಿವಾರ ನಡೆದ ಪುರುಷರ 77 ಕೆ.ಜಿ ವಿಭಾಗದ ವೇಟ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಭಾರತದ 25 ವರ್ಷದ ಸತೀಶ್ ಕುಮಾರ್ ಸಿವಲಿಂಗಮ್ ಸ್ವರ್ಣ ಪದಕವನ್ನು ಗೆದ್ದಿದ್ದಾರೆ.

ಎರಡನೇ ಸ್ಥಾನ ಪಡೆದ ಇಂಗ್ಲೆಂಡಿನ ಜಾಕ್ ಆಲಿವರ್ ಬೆಳ್ಳಿ ಪದಕ ಜಯಿಸಿದರೆ, ಮೂರನೇ ಸ್ಥಾನ ಗಳಿಸಿದ ಆಸ್ಟ್ರೇಲಿಯಾದ ಫ್ರ್ಯಾಂಕಾಯಿಸ್ ಎಟೌಂಡಿ ಕಂಚಿನ ಪದಕಕ್ಕೆ ತೃಪ್ತಿ ಪಟ್ಟುಕೊಂಡರು.

ವೈಯಕ್ತಿಕವಾಗಿ ಇದು ಸತೀಶ್ ಕುಮಾರ್ ಕಾಮನ್ವೆಲ್ತ್ ನಲ್ಲಿ ಗೆಲ್ಲುತ್ತಿರುವ ಎರಡನೇ ಚಿನ್ನದ ಪದಕವಾಗಿದೆ. 2014 ರಲ್ಲಿ ಸ್ಕಾಟ್ಲೆಂಡಿನ ಗ್ಲಾಸ್ಗೋದಲ್ಲಿ ನಡೆದ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿಯೂ ಸತೀಶ್ ಕುಮಾರ್ ಬಂಗಾರವನ್ನು ಗೆದ್ದಿದ್ದರು.

Leave a Reply

Your email address will not be published.

Social Media Auto Publish Powered By : XYZScripts.com