ಡೇವಿಸ್‌ ಕಪ್‌ : ವಿಶ್ವದಾಖಲೆ ಬರೆದ ಭಾರತದ ಲಿಯಾಂಡರ್‌ ಪೇಸ್‌

ದೆಹಲಿ : ಭಾರತದ ಅನುಭವಿ ಟೆನಿಸ್ ಆಟಗಾರ ಲಿಯಾಂಡರ್‌ ಪೇಸ್‌ ಡೇವಿಸ್‌ ಕಪ್‌ ಟೂರ್ನಿಯಲ್ಲಿ ವಿಶ್ವದಾಖಲೆ ನಿರ್ಮಿಸಿದ್ದಾರೆ.
ಇಂದು ಚೀನಾದ ಟಿಯಾಂಜಿನ್​​​​​​​ನಲ್ಲಿ ನಡೆದ ವರ್ಲ್ಡ್ ಗ್ರೂಪ್ ಪ್ಲೇ ಆಫ್ ಡಬಲ್ಸ್​​ನಲ್ಲಿ ಚೀನಾ ವಿರುದ್ಧ ಪೇಸ್ ಹಾಗೂ ರೋಹನ್ ಭೂಪಣ್ಣ ಜೋಡಿ ವಿಜಯ ಪತಾಕೆ ಹಾರಿಸಿತು. ಈ ಮೂಲಕ ಪೇಸ್ 43ನೇ ಡೇವಿಸ್ ಕಪ್​​ ಗೆದ್ದ ಮೋಸ್ಟ್ ಸಕ್ಸಸ್ ಫುಲ್ ಡಬಲ್ಸ್ ಪ್ಲೇಯರ್​​​​​​​​​​​​​​​​ ಎನಿಸಿಕೊಂಡರು.

ಈ ಮೂಲಕ ಡೇವಿಸ್‌ ಕಪ್‌ ಇತಿಹಾಸದಲ್ಲಿ ಅತಿ ಹೆಚ್ಚು ಗೆಲುವು ದಾಖಲಿಸಿದ ಹಿರಿಮೆಗೆ ಪಾತ್ರರಾಗಿದ್ದು, ಈ ಹಿಂದೆ 42 ಗೆಲುವು ಸಾಧಿಸಿದ್ದ ಇಟಲಿಯ ನಿಕೋಲಾ ಪೀಟ್ರಾಂಜೆಲಿಯವರ ದಾಖಲೆ ಮುರಿದಿದ್ದಾರೆ.
1990ನೇ ಇಸವಿಯಲ್ಲಿ ಲಿಯಾಂಡರ್‌ ಪೇಸ್‌ ಡೇವಿಸ್‌ ಕಪ್‌ಗೆ ಪಾದಾರ್ಪಣೆ ಮಾಡಿದ್ದು 43 ಗೆಲುವು ದಾಖಲಿಸುವ ಮೂಲಕ ಹೊಸ ಇತಿಹಾಸ ನಿರ್ಮಿಸಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com