ಮುಂದುವರಿದ ಪದಕ ಬೇಟೆ : ಭಾರತಕ್ಕೆ ಮತ್ತೊಂದು ಚಿನ್ನದ ಪದಕ ಗೆದ್ದುಕೊಟ್ಟ ರಾಹುಲ್‌

ಗೋಲ್ಡ್‌ ಕೋಸ್ಟ್‌ : ಕಾಮನ್‌ವೆಲ್ತ್‌ನಲ್ಲಿ ಭಾರತದ ಪದಕ ಬೇಟೆ ಮುಂದುವರಿದಿದೆ. ಪುರುಷರ 85 ಕೆ.ಜಿ ವಿಭಾಗದಲ್ಲಿ ಭಾರತದ ರಾಗಲ ವೆಂಕಟ್‌ ರಾಹುಲ್‌ ಚಿನ್ನದ ಪದಕ ಗೆದ್ದಿದ್ದಾರೆ.
ಎರಡು ಹಂತಗಳ ಸ್ಪರ್ಧೆಯಲ್ಲಿ ಕ್ರಮವಾಗಿ 151 ಕೆ.ಜಿ 187 ಕೆ.ಜಿ ಭಾರ ಎತ್ತುವ ಮೂಲಕ ಚಿನ್ನದ ಪದಕವನ್ನು ಭಾರತದ ಮಡಿಲಿಗೆ ಹಾಕಿದ್ದಾರೆ.
ರಾಹುಲ್‌ ಎದುರಾಳಿ ಸಮೋವಾದ ಡಾನ್‌ ಒಪೆಲಾಗ್‌ ಮೂರನೇ ಪ್ರಯತ್ನದಲ್ಲಿ 191 ಕೆ.ಜಿ ಭಾರ ಎತ್ತಲು ವಿಫಲವಾಗುವುದರೊಂದಿಗೆ ರಾಹುಲ್‌ ಎದುರು ಸೋಲೊಪ್ಪಿಕೊಂಡರು.

ಕ್ರೀಡಾಕೂಟದಲ್ಲಿ ಭಾರತದ ಆಟಗಾರರು ಇದುವರೆಗೂ 6 ಪದಕಗಳನ್ನು ಗೆದ್ದಿದ್ದ, ನಾಲ್ಕು ಚಿನ್ನ, ಒಂದು ಬೆಳ್ಳಿ ಹಾಗೂ ಒಂದು ಕಂಚಿನ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ.
ಭಾರತಕ್ಕೆ ಬಂದಿರುವ ಆರೂ ಪದಕಗಳೂ ವೇಯ್ಟ್‌ ಲಿಫ್ಟಿಂಗ್‌ನಲ್ಲೇ ಬಂದಿರುವುದು ವಿಶೇಷ

Leave a Reply

Your email address will not be published.