ತೆಲುಗು ಸಿನಿಮಾ ಇಂಡಸ್ಟ್ರಿಯಲ್ಲಿ ಕಾಸ್ಟಿಂಗ್‌ ಕೌಚ್‌ : ನಡು ರಸ್ತೆಯಲ್ಲೇ ಬಟ್ಟೆ ಬಿಚ್ಚಿ ರೊಚ್ಚಿಗೆದ್ದ ನಟಿ !

ಹೈದರಾಬಾದ್‌ : ತೆಲುಗು ಸಿನಿಮಾ ಇಂಡಸ್ಟ್ರಿಯಲ್ಲಿ ಲೈಂಗಿಕ ಶೋಷಣೆ ಹೆಚ್ಚುತ್ತಿದೆ. ಇದಕ್ಕೆ ಕಡಿವಾಣ ಹಾಕಲೇ ಬೇಕು ಎಂದು ನಟಿಯೊಬ್ಬರು ಅರೆಬೆತ್ತಲೆ ಪ್ರತಿಭಟನೆ ನಡೆಸಿದ್ದಾರೆ.

ಚಿತ್ರೋದ್ಯಮದಲ್ಲಿ ಚಾನ್ಸ್ ಕೇಳಿಕೊಂಡ ಬರುವ ನಟಿಯರು ಲೈಂಗಿಕ ಶೋಷಣೆಗೆ ತುತ್ತಾಗುತ್ತಿದ್ದಾರೆ ಎಂದು ನಟಿ ಶ್ರೀರೆಡ್ಡಿ ಆರೋಪಿಸಿದ್ದಾರೆ. ಅಲ್ಲದೆ ಹೈದರಾಬಾದ್‌ನ ಫಿಲ್ಮ್‌ನಗರದಲ್ಲಿರುವ ತೆಲುಗು ಫಿಲ್ಮ್‌ ಛೇಂಬರ್‌ ಎದುರು ಶನಿವಾರ ನಡುರಸ್ತೆಯಲ್ಲೇ ಅರೆನಗ್ನವಾಗಿ ಪ್ರತಿಭಟನೆ ನಡೆಸಿದ್ದಾರೆ.

ಸಲ್ವಾರ್‌ ಉಡುಪು ಧರಿಸಿ ಛೇಂಬರ್‌ ಎದುರು ಬಂದಿದ್ದ ಶ್ರೀರೆಡ್ಡಿ ಮಾಧ್ಯಮಗಳ ಮುದೆ ದಿಢೀರನೆ ಉಡುಪಿ ಕಳಚಿದ್ದಾರೆ. ಕಾಸ್ಟಿಂಗ್‌ ಕೌಚ್‌ ಬಗ್ಗೆ ಗಮನ ಸೆಳೆಯಲು ನನಗೆ ತೋಚುತ್ತಿರುವುದು ಇದೊಂದೇ ಮಾರ್ಗ ಎಂದು ಅರೆನಗ್ನವಾಗಿ ಪ್ರತಿಭಟಿಸಿದ್ದಾರೆ.

ಅನೇಕ ಮಂದಿ ನಿರ್ಮಾಪಕರು, ನಿರ್ದೇಶಕರು ನನ್ನನ್ನು ಲೈಂಗಿಕವಾಗಿ ಶೋಷಣೆ ಮಾಡಿದ್ದಾರೆ. ಮೂರು ಸಿನಿಮಾಗಳಲ್ಲಿ ನಟಿಸಿದ್ದರೂ ಇನ್ನೂ ಮೂವಿ ಆರ್ಟಿಸ್ಟ್‌ ಅಸೋಸಿಯೇಷನ್‌ ಸದಸ್ಯತ್ವ ಸಿಕ್ಕಿಲ್ಲ. ಸಿನಿಮಾಗಳಲ್ಲಿ ನಟಿಸಬೇಕೆಂದರೆ ನನ್ನ ನಗ್ನ ಚಿತ್ರಗಳು ಹಾಗೂ ವಿಡಿಯೋ ಬೇಕೆಂದು ಅನೇ ನಿರ್ಮಾಪಕರು ಹಾಗೂ ನಿರ್ದೇಶಕರು ಕೇಳಿದ್ದರು ಎಂದಿದ್ದಾರೆ.

ಅವರು ನನ್ನ ವಿಡಿಯೋ ನೋಡಿದ್ದಾರೆ. ಆದರೆ ಚಾನ್ಸ್ ಮಾತ್ರ ನೀಡಿಲ್ಲ. ಬದಲಿಗೆ ಲೈವ್ ವಿಡಿಯೋ ಬೇಕೆಂದು ಬೇಡಿಕೆ ಇಟ್ಟಿದ್ದರು. ತೆಲುಗು ನಟಿಯರನ್ನು ಲೈಂಗಿಕವಾಗಿ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಅದಕ್ಕೆ ನಾನು ಉದಾಹರಣೆ ಎಂದು ಕಿಡಿಕಾರಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com