ಬೆಳ್ಳಂದೂರು ಕೆರೆ ಆಯ್ತು…ಈಗ ಭೂಮಿಯಿಂದಲೂ ಉಕ್ಕುತ್ತಿದೆ ಬೆಂಕಿ !!

ಬೆಂಗಳೂರು : ನಗರದ ಹೊರವಲಯದಲ್ಲಿ ಭೂಮಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ನೆಲಮಂಗಲದ ಸಮೀಪವಿರುವ ಗಂಗಾಧರಯ್ಯನ ಪಾಳ್ಯದ ಬಳಿ ಯುವಕ ಅಂಜಿನಪ್ಪ ಎಂಬುವವರು ಬಹಿರ್ದೆಸೆಗೆಂದು ತೆರಳಿದ್ದರು. ಈ ವೇಳೆ ಅಂಜಿನಪ್ಪ ಅವರ ಕಾಲು ಸುಟ್ಟಿದ್ದು ಆಸ್ಪತ್ರೆಗೆ ತೆರಳಿದ ವೇಳೆ ಘಟನೆ ಬೆಳಕಿಗೆ ಬಂದಿದೆ.
ಬಿಸಿಲಿನ ಬೇಗೆಯ ಜೊತೆ ಭೂಮಿಯಲ್ಲಿ ಬೆಂಕಿ ಕಾಣಿಸಿಕೊಂಡಿರುವುದು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಬೆಂಕಿ ಬಂದ ಭೂಮಿಯ ಸುತ್ತಮುತ್ತ ಕಾರ್ಖಾನೆಗಳ ಸಂಖ್ಯೆ ಹೆಚ್ಚಿದ್ದು, ಈ ಹಿನ್ನೆಲೆಯಲ್ಲಿ ರಾಸಾಯನಿಕ ಪದಾರ್ಥಗಳು ಮಣ್ಣಿನಲ್ಲಿ ಬೆರೆತು ಬೆಂಕಿ ಕಾಣಿಸಿಕೊಂಡಿರುವ ಶಂಕೆ ವ್ಯಕ್ತವಾಗಿದೆ.
ಘಟನಾ ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿ ಹೆಚ್ಚಿನ ಶೋಧ ನಡೆಸುತ್ತಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com