RCB ಅಭಿಮಾನಿಗಳಿಗೆ ಕೊಹ್ಲಿ ಭರವಸೆಯ ಮಾತು : ವಿರಾಟ್ ಹೇಳಿದ್ದೇನು..?

ಇಂಡಿಯನ್ ಪ್ರಿಮಿಯರ್ ಲೀಗ್ ನ 11ನೇ ಸೀಸನ್ ಗೆ ಏಪ್ರಿಲ್ 7 ರಂದು ಶನಿವಾರ ಅಧಿಕೃತ ಚಾಲನೆ ದೊರೆಯಲಿದ್ದು ಅಭಿಮಾನಿಗಳಲ್ಲಿ ಕ್ರಿಕೆಟ್ ಕಾವು ಹೆಚ್ಚಾಗಿದೆ. ಏಪ್ರಿಲ್ 8 ರಂದು ಭಾನುವಾರ ರಾಯಲ್ ಚಾಲೆಂಜರ್ ಬೆಂಗಳೂರು ತನ್ನ ಮೊದಲ ಪಂದ್ಯದಲ್ಲಿ ಕೋಲ್ಕತಾ ನೈಟ್ ರೈಡರ್ಸ್ ತಂಡವನ್ನು ಈಡನ್ ಗಾರ್ಡನ್ಸ್ ಮೈದಾನದಲ್ಲಿ ಎದುರಿಸಲಿದೆ.

ಚುಟುಕು ಕ್ರಿಕೆಟ್ ಸಮರಕ್ಕೆ ಕ್ಷಣಗಣನೆ ಆರಂಭಗೊಂಡಿರುವ ಈ ಸಮಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿ, RCB ಅಭಿಮಾನಿಗಳಲ್ಲಿ ಸಂತಸ ಮೂಡಿಸುವ ಮಾತೊಂದನ್ನು ಹೇಳಿದ್ದಾರೆ.

‘ ಐಪಿಎಲ್ ಗೆಲ್ಲಬೇಕೆಂಬ ಬಯಕೆ RCB ಅಭಿಮಾನಿಗಳಲ್ಲಿ ಎಷ್ಟಿದೆಯೋ, ಅದಕ್ಕಿಂತ ಹೆಚ್ಚಿನ ಬಯಕೆ ನನ್ನಲ್ಲಿದೆ. 10 ವರ್ಷಗಳಿಂದ ಬೆಂಗಳೂರು ತಂಡದ ಪರವಾಗಿ ಆಡುತ್ತಿದ್ದೇನೆ, ನಾವು ಈ ಹಿಂದೆ ಮೂರು ಬಾರಿ ಫೈನಲ್ ನಲ್ಲಿ ಎಡವಿದ್ದೇವೆ. ಈ ಬಾರಿ ಕಪ್ ಗೆಲ್ಲುವ ಗುರಿಯನ್ನು ಸಾಧಿಸಲು ನನ್ನ ಬದ್ಧತೆ 120 % ಆಗಿರಲಿದೆ ಎಂದು ಭರವಸೆಯಿಂದ ಹೇಳಬಲ್ಲೆ ‘ ಎಂದಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com