Cricket : 6138 ಕೋಟಿ ನೀಡಿ ಬಿಸಿಸಿಐ ಮಾಧ್ಯಮ ಹಕ್ಕು ಪಡೆದ ಸ್ಟಾರ್ ಇಂಡಿಯಾ

ಮೂರು ದಿನಗಳವರೆಗೆ ಆನ್ ಲೈನ್ ಮುಖಾಂತರ ಬಿಸಿಸಿಐ ನಡೆಸಿದ ಮಾಧ್ಯಮ ಹಕ್ಕು ಮಾರಾಟದ ಪ್ರಕ್ರಿಯೆ ಶುಕ್ರವಾರ ಅಂತ್ಯಗೊಂಡಿದೆ. 6138 ಕೋಟಿ ರೂಗಳನ್ನು ನೀಡಿದ ಸ್ಟಾರ್ ಇಂಡಿಯಾ ಸಮೂಹ, ರಿಲಯನ್ಸ್ ಜಿಯೋ ಹಾಗೂ ಸೋನಿ ಪಿಕ್ಚರ್ಸ್ ನೆಟ್ವರ್ಕ್ ಗಳನ್ನು ಹಿಂದಿಕ್ಕಿ ಬಿಸಿಸಿಐ ಮಾಧ್ಯಮ ಪ್ರಸಾರದ ಹಕ್ಕನ್ನು ಪಡೆದುಕೊಂಡಿದೆ.

5 ವರ್ಷಗಳ ಕಾಲ ಅಂದರೆ 2018 ರಿಂದ 2013 ರವರೆಗೆ ಭಾರತದಲ್ಲಿ ನಡೆಯಲಿರುವ ಅಂತರಾಷ್ಟ್ರೀಯ ದ್ವಿಪಕ್ಷೀಯ ಕ್ರಿಕೆಟ್ ಸರಣಿಯ ಪಂದ್ಯಗಳನ್ನು ಪ್ರಸಾರ ಮಾಡುವ ಹಕ್ಕನ್ನು ಸ್ಟಾರ್ ಇಂಡಿಯಾ ತನ್ನದಾಗಿಸಿಕೊಂಡಿದೆ. 2018 ರಿಂದ 2023 ರವರೆಗೆ ಭಾರತದಲ್ಲಿ ಒಟ್ಟು 102 ಅಂತರಾಷ್ಟ್ರೀಯ ಪಂದ್ಯಗಳು ನಡೆಯಲಿವೆ.  ಅಂದರೆ ಪ್ರತಿ ಪಂದ್ಯದ ಪ್ರಸಾರಕ್ಕಾಗಿ ಸ್ಟಾರ್ ಇಂಡಿಯಾ ಅಂದಾಜು 60.1 ಕೋಟಿ ನೀಡಿದೆ.

2012 ರಿಂದ 2018 ರವರೆಗೆ ಪ್ರಸಾರದ ಹಕ್ಕನ್ನು ಸಹ ಪಡೆದಿದ್ದ ಸ್ಟಾರ್ ಇಂಡಿಯಾ ಸಮೂಹ 3851 ಕೋಟಿ ನೀಡಿ ಖರೀದಿಸಿತ್ತು.

 

Leave a Reply

Your email address will not be published.

Social Media Auto Publish Powered By : XYZScripts.com