CWG 2018 : ವೇಟ್ ಲಿಫ್ಟಿಂಗ್ : ಭಾರತಕ್ಕೆ 2ನೇ ಚಿನ್ನ ಗೆದ್ದು ಕೊಟ್ಟ ಸಂಜಿತಾ ಚಾನು

ಆಸ್ಟ್ರೇಲಿಯಾದ ಗೋಲ್ಡ್ ಕೋಸ್ಟ್ ನಗರದಲ್ಲಿ ನಡೆಯುತ್ತಿರುವ 21ನೇ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಭಾರತಕ್ಕೆ ಎರಡನೇ ಚಿನ್ನದ ಪದಕ ದೊರೆತಿದೆ. ಶುಕ್ರವಾರ ನಡೆದ ಮಹಿಳೆಯರ ವೇಟ್ ಲಿಫ್ಟಿಂಗ್ 53 ಕೆ.ಜಿ ವಿಭಾಗದ ಸ್ಪರ್ಧೆಯಲ್ಲಿ ಭಾರತದ ಸಂಜಿತಾ ಚಾನು ಸ್ವರ್ಣ ಪದಕ ಗೆದ್ದಿದ್ದಾರೆ.

192 ಕೆ.ಜಿ ಭಾರವನ್ನು ಎತ್ತಿದ ಸಂಜಿತಾ ಚಾನು, ಪಪುವಾ ನ್ಯೂ ಗಿನಿಯದ ಪ್ರಬಲ ಪ್ರತಿಸ್ಫರ್ಧಿಯಾಗಿದ್ದ ಡೀಕಾ ಟೌವಾ ಅವರನ್ನು ಹಿಂದಿಕ್ಕಿ ಚಿನ್ನದ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ.

ಸಂಜೀತಾ ಚಾನು ಅವರಿಗೆ ಇದು ಎರಡನೇ ಕಾಮನ್ವೆಲ್ತ್ ಚಿನ್ನವಾಗಿದೆ. 2014 ರಲ್ಲಿ ನಡೆದಿದ್ದ ಗ್ಲಾಸ್ಗೋ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ 48 ಕೆ.ಜಿ ವಿಭಾಗದ ಮಹಿಳೆಯರ ವೇಟ್ ಲಿಫ್ಟಿಂಗ್ ನಲ್ಲಿ ಸಂಜೀತಾ ಚಾನು ಬಂಗಾರದ ಪದಕ ಗೆದ್ದಿದ್ದರು.

 

Leave a Reply

Your email address will not be published.

Social Media Auto Publish Powered By : XYZScripts.com