ನಾನು ಜಾತಿ ರಾಜಕೀಯ ಮಾಡಿದ್ರೆ ಐದು ವರ್ಷ ಅಧಿಕಾರದಲ್ಲಿರೋಕಾಗ್ತಿತ್ತಾ : ಸಿದ್ದರಾಮಯ್ಯ

ಮೈಸೂರು : ನಾನು ಒಂದು ಜಾತಿ ಹೆಸರಲ್ಲಿ ಕಾರ್ಯಕ್ರಮ ರೂಪಿಸಿಲ್ಲ. ಎಲ್ಲಾ ಜಾತಿಯರನ್ನ‌ ನೆನಪಿನಲ್ಲಿಟ್ಟುಕೊಂಡು ಮಾಡಿದ್ದೀವಿ. ನಾನು ಜಾತಿ ಹೆಸರಿನಲ್ಲಿ ರಾಜಕೀಯ ಮಾಡಿದ್ರೆ, ಐದು ವರ್ಷ ಪೂರೈಸಲು ಸಾದ್ಯನಾ. ರಾಜಕೀಯ ಪ್ರೇರಿತ ದೃಷ್ಡಿಯಿಂದ ಸಿದ್ದರಾಮಯ್ಯ ಜಾತಿವಾದಿ ಎಂದು ಹೇಳುತ್ತಿದ್ದಾರೆ ಅಷ್ಟೆ ಎಂದು ಸಿಎಂ ಸಿದ್ದರಾಮಯ್ಯ ಒಕ್ಕಲಿಗರ ಸಭೆಯಲ್ಲಿ ಹೇಳಿಕೆ ನೀಡಿದ್ದಾರೆ.
ಮೈಸೂರಿನಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ನನಗೆ ಉತ್ತರ ಕರ್ನಾಟಕದಲ್ಲಿ ನಿಲ್ಲುವಂತೆ ಒತ್ತಾಯ ಬರುತ್ತಿದೆ. ಅಲ್ಲಿನ ಕಾಂಗ್ರೆಸ್ ಕಾರ್ಯಕರ್ತರು ಒತ್ತಾಯ ಮಾಡುತ್ತಿದ್ದಾರೆ. ಆದರೆ ನಾನು ಅಲ್ಲಿಗೆ ಹೋಗೋದಿಲ್ಲ. ನಾನು ಚಾಮುಂಡೇಶ್ವರಿಯಲ್ಲೇ ಸ್ಪರ್ಧೆ ಮಾಡುತ್ತೇನೆ.ವರುಣಾಕ್ಕೆ ನಾನು ಸುಮ್ಮನೆ ಅರ್ಜಿ ಹಾಕಿದರೂ ಗೆಲ್ಲಿಸುತ್ತಾರೆ. ವರುಣಾ ಜನತೆಯ ಮೇಲೆ ನನಗೆ ನಂಬಿಕೆ ಇದೆ. ಕಳೆದೆರಡು ಬಾರಿ 30 ಸಾವಿರದಿಂದ ಗೆಲ್ಲಿಸಿ ಕೊಟ್ಟಿದ್ದಾರೆ. ಆದರೂ ನಾನು ಈ ಬಾರಿ ನನ್ನ ರಾಜಕೀಯ ಆರಂಭದ ಕ್ಷೇತ್ರದಲ್ಲೇ ಸ್ಪರ್ಧೆ ಮಾಡುವುದಾಗಿ ಹೇಳಿದ್ದಾರೆ.

ಭಾಷಣ ಪ್ರಾರಂಭಕ್ಕೂ ಮುನ್ನ ಎಲ್ಲರು ಹಿಂದೆ ಸರೀರಿ ವೇದಿಕೆ ಮುಂಭಾಗ ಇರುವ ಜನರಿಗೆ ಕಾಣಿಸೋಲ್ಲ  ಎಂದ ಸಿಎಂ, ಭಾಷಣದ ಮಧ್ಯ ವೇದಿಕೆ ಕೆಳಗೆ ಕುಳಿತಿದ್ದ ತಮ್ಮ ಸ್ನೇಹಿತನ ಏ ಚನ್ನಾಗಿದ್ದಿಯೇನಾ ಎಂದು ಮಾತನಾಡಿಸಿದ್ದಾರೆ.

7 ಬಾರಿ ನಾನು ಶಾಸಕನಾಗಿ ಗೆದ್ದಿದ್ದೇನೆ ಹಾಗಾಗಿ ಅತ್ಯಂತ ಹತ್ತಿರದಿಂದ ಜನ ನನ್ನನ್ನು ಬಲ್ಲರು. ತಾಲೂಕು ಅಭಿವೃದ್ಧಿ ಮಂಡಳಿಯಿಂದ ಮುಖ್ಯಮಂತ್ರಿವರೆಗೆ ನಾನು ಬೆಳೆದಿದ್ದೇನೆ.  ಜನ ಕೊಟ್ಟ ಅವಕಾಶ ಉಪಯೋಗಿಸಿಕೊಂಡಿದ್ದೇನೆ ಅದು ಜನರ ಅಭಿವೃದ್ದಿಗಾಗಿ ಬಿಟ್ಟರೆ ನಾನು ಜಾತಿ ರಾಜಕೀಯ ಮಾಡಲು, ಅಥವಾ ನನ್ನ ಸ್ವಾರ್ಥಕ್ಕಾಗಿ ಕೆಲಸ ಮಾಡಿಲ್ಲ. ನನ್ನ ಕಾರ್ಯಕ್ರಮಗಳು ಯಾವುದೇ ಒಂದು ಜಾತಿಗೆ ಒತ್ತು ಕೊಟ್ಟಿಲ್ಲ.  ಕೆಲವರು ಸಿದ್ದರಾಮಯ್ಯ ಅಹಿಂದ ಅಂತಾರೆ ಅದರೆ ನಾನು ಎಲ್ಲರಿಗೂ ಸಮಾನ ಅವಕಾಶ ಕೊಟ್ಟಿದ್ದೇನೆ. ನಾನು ಮೇಲು ಕೀಳು ಅಂತ ಹೇಳೋಕ್ಕೆ ಹೋಗೋಲ್ಲ ನನಗೆ ಎಲ್ಲರೂ ಒಂದೇ ಎಂದಿದ್ದಾರೆ.

Leave a Reply

Your email address will not be published.