ಚುನಾವಣೆಯಲ್ಲಿ ಎದುರಾಳಿಗಳನ್ನು ಹೇಗೆ ಸೋಲಿಸಬೇಕು ಅಂತ ನನಗೂ ಗೊತ್ತು : CM

ಮೈಸೂರು : ಚುನಾವಣೆಯಲ್ಲಿ ಹೇಗೆ ಎದುರಾಳಿಗಳನ್ನು ಸೋಲಿಸಬೇಕು ಎಂಬುದು ನನಗೂ ಗೊತ್ತಿದೆ.  ನಾನೂ ಕೂಡ ಬಿಜೆಪಿ, ಜೆಡಿಎಸ್‌ನ್ನು ಸೋಲಿಸುತ್ತೇನೆ ಎಂದು ಕುಮಾರಸ್ವಾಮಿ ಹಾಗೂ ಯಡಿಯೂರಪ್ಪನಿಗೆ ಸಿಎಂ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.

ಅವರನ್ನ ಸೋಲಿಸಲು ವಾರಗಳು ಬೇಡ. ಕೇವಲ ಒಂದೇ ದಿನ ಪ್ರಚಾರಕ್ಕೆ ಹೋದರೆ ಸಾಕು. ಉಪಚುನಾವಣೆಯಲ್ಲೂ ಇಂತಹದ್ದೇ ಹೇಳಿಕೆ‌ ನೀಡಿದ್ರು. ಎಲ್ಲರೂ ಒಂದಾಗಿ ಪ್ರಯತ್ನ ಮಾಡಿದ್ರು. ದೇವೇಗೌಡರು ಬಂದು ಕಣ್ಣಿರು ಹಾಕಿದ್ರು. ಆದರೂ ನನ್ನನ್ನ ಯಾರು ಏನು ಮಾಡಲು ಆಗಲೇ ಇಲ್ಲ. ರಾಜಕೀಯ ಪರಿಸ್ಥಿತಿ ಬದಲಾಗಬಹುದು ಗೆಲುವು ನನ್ನದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ವಿಶ್ವನಾಥ್ ಶ್ರೀನಿವಾಸ್ ಪ್ರಸಾದ್ ನಮ್ಮ‌ಕ್ಷೇತ್ರದವರಲ್ಲ ಎಂದಿರುವ ಸಿಎಂ, ನಾನು ಯಾರಿಗೂ ಹೆದರುವುದಿಲ್ಲ. ಚಾಮುಂಡೇಶ್ವರಿ ಕ್ಷೇತ್ರದಿಂದಲ್ಲೇ ನನ್ನ ಸ್ಪರ್ಧೆ ಖಚಿತ. ನಾನು ಚಾಮುಂಡೇಶ್ವರಿ ಬಿಟ್ಟು ಎಲ್ಲೂ ಸ್ಪರ್ಧೆ ಮಾಡುವುದಿಲ್ಲ. ನಾನು ಚಾಮುಂಡೇಶ್ವರಿ ಯಲ್ಲಿ ನಿಲ್ಲುತ್ತೇನೆ ಎಂದು ಮೂರು ಬಾರಿ ಉಚ್ಛರಿಸಿದ್ದಾರೆ.

Leave a Reply

Your email address will not be published.