ಈ ಬಾರಿ ಚುನಾವಣೆಲಿ ಸಿದ್ದರಾಮಯ್ಯ ಗೆದ್ದು ತೋರಿಸಲಿ ನೋಡೋಣ : HDK

ಹುಬ್ಬಳ್ಳಿ : ನಾನು ರಾಜ್ಯಾದ್ಯಂತ ಪ್ರವಾಸ ಕೈಗೊಂಡಿದ್ದು, ಜನರಲ್ಲಿ ಜೆಡಿಎಸ್ ಪರ ಒಲವು ಕಂಡು ಬರುತ್ತಿದೆ ಎಂದು ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌ಡಿ ಕುಮಾರಸ್ವಾಮಿ ಹೇಳಿದ್ದಾರೆ.
ಹುಬ್ಬಳ್ಳಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಬಿಜೆಪಿ , ಕಾಂಗ್ರೆಸ್ ರಾಷ್ಟ್ರೀಯ ನಾಯಕರುಗಳು ರಾಜ್ಯ ಸುತ್ತುತ್ತಿದ್ದಾರೆ. ಆದ್ರೆ ಜನರ ಸಮಸ್ಯೆಗಳ‌ ಬಗ್ಗೆ ಮಾತ್ರ ಕಡಿಮೆ ಮಾತನಾಡುತ್ತಾರೆ, ಕೇವಲ ಪರಸ್ಪರ ಟೀಕೆಗೆ ಮಾತ್ರ ಇದು ಸೀಮಿತವಾಗಿದೆ. ಆದ್ರೆ ಜೆಡಿಎಸ್ ಜನರ ಸಮಸ್ಯೆಯಗಳ ಬಗ್ಗೆ ಮುಕ್ತವಾಗಿ ಚೆರ್ಚೆ ಮಾಡುತ್ತಿದೆ ಎಂದಿದ್ದಾರೆ.

ಎರಡು ರಾಷ್ಟ್ರೀಯ ಪಕ್ಷಗಳನ್ನ ಎದುರಿಸುವ ಶಕ್ತಿ ಜನತೆ ನನಗೆ ನೀಡುತ್ತಿದ್ದಾರೆ. ಜೆಡಿಎಸ್ ಗೆ ೨೫ ಸ್ಥಾನ ಗೆಲ್ಲುವುದಿಲ್ಲ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಎಚ್‌.ಡಿಕೆ ತಿರಗೇಟು ನೀಡಿದ್ದು,  ನಾನು ಯಾವುದೇ ಭ್ರಮಾ ಲೋಕದಲ್ಲಿ ಇಲ್ಲ. ಜನತೆಯ ಭ್ರಮಾ ಲೋಕದಲ್ಲಿದ್ದೇನೆ. ಸ್ಪಷ್ಟ ಬಹುಮತ ದೊಂದಿಗೆ ನಾವು ಅಧಿಕಾರಕ್ಕೆ‌ ಬರುತ್ತೇವೆ.  ಟೀಕೆ ಟಿಪ್ಪಣಿ ಗಳಿಂದ ಜನತೆ ಸಮಸ್ಯೆ ಪರಿಹಾರ ಕಾಣುವುದಿಲ್ಲ ಎಂದಿದ್ದಾರೆ.
ಎರಡು ಕಡೆ ಕುಮಾರಸ್ವಾಮಿ ಸ್ಪರ್ಧೆ ವಿಚಾರ ವಾಗಿ ಸಿಪಿ ಯೋಗಿಶ್ವರ್ ಹೇಳಿಕೆ ವಿಚಾರ ಸಂಬಂಧ ಎಚ್‌ಡಿಕೆ ಪ್ರತಿಕ್ರಿಯಿಸಿದ್ದು, ಅವರು ನನಗೆ ಸಲಹೆ ಕೊಡುವುದು ಬಿಟ್ಟು, ಅವರ ಇತಿಹಾಸ ನೋಡಿಕೊಳ್ಳಲಿ.
ನನ್ನ ಬಳಿ ಯಾವುದೇ  ವಿದೇಶಿ ಆಸ್ತಿ‌ ಇದ್ದರೆ, ಅದನ್ನು ವಶಕ್ಕೆ ತೆಗೆದುಕೊಂಡು, ರೈತರಿಗೆ ಹಂಚಲಿ. ಯಡಿಯೂರಪ್ಪ ನನ್ನ ಅಕ್ರಮ ಆಸ್ತಿ ಹುಡಕಿದರು. ಸಿದ್ದರಾಮಯ್ಯ ಸಹ ನನ್ನ ಅಕ್ರಮ ಆಸ್ತಿಯನ್ನು ಹುಡುಕುವ ಪ್ರಯತ್ನ ಮಾಡಿದ್ರು. ಅವರಿಬ್ಬರೂ ಕಾಣದ ಅಕ್ರಮ ಆಸ್ತಿ‌ ಸಿಪಿ ಯೋಗಿಶ್ವರ ಕಂಡಿದೆ ಎಂದು ವ್ಯಂಗ್ಯವಾಡಿದ್ದಾರೆ.
ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಸೋಲಿಸಬೇಕು ಎನ್ನುವುದಕ್ಕಿಂತ  ನಮ್ಮ‌ ಪಕ್ಷದ ಅಭ್ಯರ್ಥಿ ಗೆಲ್ಲಬೇಕು ಎಂದಿದ್ದಾರೆ. ಹಿಂದಿನ ಚುನಾವಣೆಯಲ್ಲಿ  ಸಿದ್ದರಾಮಯ್ಯ ಗೆದ್ದಿದ್ದು ಹೇಗೆ ಅನ್ನೋದು ಗೊತ್ತಿದೆ. ಈಗ ಬಾರೀ ಚುನಾವಣೆಲ್ಲಿ ಗೆಲ್ಲಲಿ ನೋಡೋಣ ಎಂದಿದ್ದಾರೆ.

Leave a Reply

Your email address will not be published.