ಗರ್ಭಚೀಲದ ಜೊತೆ ಕಸದ ತೊಟ್ಟಿಯಲ್ಲಿ ಹೆಣ್ಣು ಮಗುವನ್ನು ಎಸದುಹೋದ್ಳು ನಿಷ್ಕರುಣಿ ತಾಯಿ !

ಚಿಕ್ಕಬಳ್ಳಾಪುರ : ಹೆಣ್ಣೊಂದು ಕಲಿತರೆ ಶಾಲೆಯೊಂದುನ ತೆರೆದಂತೆ. ಹೆಣ್ಣು ಹುಟ್ಟಿದರೆ ಅದೃಷ್ಟ ಲಕ್ಷ್ಮಿ ಎನ್ನುವ ಮಾತು  ಸಾಮಾನ್ಯವಾಗಿದ್ದು, ಹೆಣ್ಣು ಮಕ್ಕಳನ್ನು ಗಂಡಿನ ಸಮಾನವಾಗಿ ಕಾಣಬೇಕು ಎಂದು ಮಾತನಾಡುವವರ ಸಂಖ್ಯೆ ಹೆಚ್ಚೇ ಇದೆ. ಆದರೆ ಈಗಲೂ ಹೆಣ್ಣು ಹುಟ್ಟಿದರೆ ಶಾಪ ಎಂದು ಹೆತ್ತ ಮಕ್ಕಳನ್ನೇ ಎಸೆದು ಹೋಗುತ್ತಿರುವ ಘಟನೆಯನ್ನು ನೋಡುತ್ತಲೇ ಇರುತ್ತೇವೆ.

ಅದರಂತೆ ಚಿಕ್ಕಬಳ್ಳಾಪುರದ ಕಸದ ತೊಟ್ಟಿಯಲ್ಲಿ ಹೆಣ್ಣು ಮಗುವನ್ನು ಗರ್ಭಚೀಲದ ಸಮೇತ ಎಸೆದು ಹೋದ ಘಟನೆ ನಡೆದಿದೆ. ಕಳೆದ ರಾತ್ರಿ ಮಗುವನ್ನು ಚಿಂತಾಮಣಿ ನಗರದ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದ ಹಿಂಭಾಗದ ಕಸದ ತೊಟ್ಟಿಯಲ್ಲಿ ಎಸೆದು ಪರಾರಿಯಾಗಿದ್ದಾರೆ. ಇಂದು ಮುಂಜಾನೆ ಕಸ ಗುಡಿಸುವವರ ಮಗು ಕಂಡಿದ್ದು. ಕೂಡಲೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಚಿಂತಾಮಣಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೋಷಕರಿಗಾಗಿ ಹುಡುಕಾಟ ನಡೆಸಿದ್ದಾರೆ.

 

 

ಚಿಂತಾಮಣಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ.

Leave a Reply

Your email address will not be published.