ನಾನು ಶಾಸಕನಾದ್ರೆ, ಊಟ, ಬಟ್ಟೆ, ಡೇಟಾ, ಮದ್ಯ ಎಲ್ಲಾ ಫ್ರೀ…: ಭರ್ಜರಿ ಆಫರ್‌ ಕೊಟ್ಟ ಅಭ್ಯರ್ಥಿ !

ಚಿಕ್ಕಬಳ್ಳಾಪುರ :  ನಾನು ಶಾಸಕನಾದರೆ ಎಣ್ಣೆ, ಮಟನ್‌, ಕಾಫಿ, ಟೀ, ಊಟ, ಮಹಿಳೆಯರಿಗೆ ಅಡುಗೆ ಸಾಮಗ್ರಿ ಇತ್ಯಾದಿ ಎಲ್ಲವೂ ಉಚಿತವಾಗಿ ಕೊಡುತ್ತೇನೆ ಎಂದು ಅಭ್ಯರ್ಥಿಯೊಬ್ಬರು ಚುನಾವಣಾ ಪ್ರಣಾಳಿಕೆಯನ್ನು ಮುದ್ರಣ ಮಾಡಿದ್ದು. ಸೋಶಿಯಲ್‌ ಮೀಡಿಯಾದಲ್ಲಿ ಈ ಪ್ರಣಾಳಿಕೆ ಸಖತ್ ವೈರಲ್‌ ಆಗಿದೆ.

ಚಿಕ್ಕಬಳ್ಳಾಪುರದ ಚಿಂತಾಮಣಿಯ ನಿವಾಸಿಯಾದ ವೈ.ಎನ್‌ ಸುರೇಶ್‌ ಇಂತಹ ಉಚಿತ ಆಫರ್‌ಗಳನ್ನು ನೀಡಿದ್ದು, ಇಂತಹ ಪ್ರಣಾಳಿಕೆಯ ಮೂಲಕ ಜನರನ್ನು ತಮ್ಮತ್ತ ಸೆಳೆಯುವ ಪ್ರಯತ್ನ ಮಾಡಿದ್ದಾರೆ.

ಸುರೇಶ್‌ ಅವರು ನಾನ್ಯಾಕೆ ಎಂಎಲ್‌ಎ ಆಗಬಾರದು ಎಂಬ ಶೀರ್ಷಿಕೆಯಡಿ ಈ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದಾರೆ. ನಾನು ಗೆದ್ದರೆ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಮದ್ಯ ಫ್ರೀ, ಮಹಿಳೆಯರಿಗೆ ದನಿಯಾ, ಖಾರದ ಪುಡಿ, ಉಪ್ಪಿನ ಕಾಯಿ ಫ್ರೀ, ಕ್ಷೇತ್ರವನ್ನು ಹಸಿವು ಮುಕ್ತ ಮಾಡಲು ಎಲ್ಲಾ ಜನತೆಗೆ ಮೂರು ಹೊತ್ತು ಊಟ, ಕಾಫಿ ಜೊತೆಗೆ ವಾರಕ್ಕೆರಡು ಬಾರಿ ಮಟನ್ ಫ್ರೀ ನೀಡುವುದಾಗಿ ಹೇಳಿದ್ದಾರೆ.

ಯಾರದ್ದಾದರೂ ಹುಟ್ಟುಹಬ್ಬ ಬಂದರೆ ಹೊಸ ಬಟ್ಟೆ, ಬಸ್‌ಗಳಲ್ಲಿ ಫ್ರೀ ಓಡಾಟ, ಆರೋಗ್ಯ, ಶಿಕ್ಷಣ, ಮದುವೆಯಾಗುವವರಿಗೆ ಬಟ್ಟೆ, ಮಾಂಗಲ್ಯ ಸರ,, ಮೊಬೈಲ್‌, ಡೇಟಾ, ಉಚಿತವಾಗಿ ಕರೆ ನೀಡುವುದಾಗಿ ಹೇಳಿದ್ದಾರೆ.ಈ ಪ್ರಣಾಳಿಕೆ ನೋಡಿದ ಜನ ಹೆಚ್ಚಿನದಾಗಿ ಶೇರ್‌ ಮಾಡುತ್ತಿದ್ದಾರೆ.

 

 

Leave a Reply

Your email address will not be published.

Social Media Auto Publish Powered By : XYZScripts.com