ವಿಶ್ವ ಆರೋಗ್ಯ ದಿನ : ಶಾಂತಿನಿಕೇತನ ಶಾಲೆಯಲ್ಲಿ ವಿಶೇಷ ದಿನಕ್ಕೆ ಸಾಕ್ಷಿಯಾದ ಗಣ್ಯರು

ಬೆಂಗಳೂರು : ವಿಶ್ವ ಆರೋಗ್ಯ ದಿನದ ಹಿನ್ನೆಲೆಯಲ್ಲಿ ಗಿರಿನಗರದ ಶಾಂತಿನಿಕೇತನ ಶಾಲೆಯ ಮಕ್ಕಳು ವಿಭಿನ್ನವಾಗಿ ಆಚರಣೆ ಮಾಡಿದ್ದಾರೆ.

ಮಕ್ಕಳು ಶಾಲೆಯ ಶಿಕ್ಷಕ ಸಿಬ್ಬಂದಿ ಆರೋಗ್ಯದ ಬಗ್ಗೆ ಅರಿವು ಮೂಡಿಸುವ ಕೆಲಸ ಮಾಡಿದ್ದು, ಈ ಸಂದರ್ಭದಲ್ಲಿ ಮಿಸ್‌ ಇಂಡಿಯಾ ಫೆಮಿನಾ ಕರ್ನಾಟಕ-2018ರ ಗರಿಯನ್ನು ಮುಡಿಗೇರಿಸಿಕೊಂಡಿರುವ  ಭಾವನಾ ದುರ್ಗಮ್‌, ಖ್ಯಾತ ಹಿನ್ನೆಲೆ ಗಾಯಕಿ ಸ್ಪರ್ಶ ಆರ್‌, ಮಕ್ಕಳ ಹಕ್ಕುಗಳ ಹೋರಾಟ ಸಂಸ್ಥೆ (ಸಿಆರ್‌ಐಎಸ್‌ಪಿ)ಯ ಮುಖ್ಯಸ್ಥ ಕುಮಾರ್ ಜಹಗೀರ್‌ದಾರ್‌ ಭಾಗಿಯಾಗಿದ್ದರು.

ಇದೇ ವೇಳೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕುಮಾರ್‌ ಜಹಗೀರ್‌ದಾರ್‌ ಮಕ್ಕಳಿಗೆ ಆರೋಗ್ಯದ ಕಾಳಜಿ ಕುರಿತಂತೆ ಕೆಲ ಸಲಹೆ ಹಾಗೂ ಮಾಹಿತಿ ನೀಡಿದರು.

Leave a Reply

Your email address will not be published.

Social Media Auto Publish Powered By : XYZScripts.com