ಬಾಲ್ ಟ್ಯಾಂಪರಿಂಗ್ ಪ್ರಕರಣದಿಂದ ಆಘಾತವಾಗಿದೆ : ರಿಕಿ ಪಾಂಟಿಂಗ್

ಬಾಲ್ ಟ್ಯಾಂಪರಿಂಗ್ ಪ್ರಕರಣದ ಬಗ್ಗೆ ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್ ಗುರುವಾರ ಮಾಧ್ಯಮಗಳ ಎದುರು ಪ್ರತಿಕ್ರಿಯೆ ನೀಡಿದ್ದಾರೆ. ‘ ಒಬ್ಬ ಮಾಜಿ ಕ್ರಿಕೆಟಿಗನಾಗಿ, ನಾಯಕನಾಗಿ ಕೇಪ್ ಟೌನ್ ಟೆಸ್ಟ್ ವೇಳೆ ಮೈದಾನದಲ್ಲಿ ನಡೆದ ಘಟನೆಯ ಬಗ್ಗೆ ಸಹಜವಾಗಿಯೇ ನನಗೆ ಶಾಕ್ ಆಗಿದೆ ‘ ಎಂದು ರಿಕಿ ಪಾಂಟಿಂಗ್ ಹೇಳಿದ್ದಾರೆ.

‘ ಖುಷಿಯ ವಿಚಾರ ಏನೆಂದರೆ, ಇಬ್ಬರೂ ಆಟಗಾರರು (ಸ್ಮಿತ್ ಹಾಗೂ ವಾರ್ನರ್), ಆಸ್ಟ್ರೇಲಿಯಾ ಕ್ರಿಕೆಟ್ ಬೋರ್ಡ್ ತಮಗೆ ವಿಧಿಸಿರುವ ನಿಷೇಧ ಶಿಕ್ಷೆಯನ್ನು ಒಪ್ಪಿಕೊಂಡಿರುವುದರಿಂದ ಪ್ರಕರಣ ಅಂತ್ಯದ ಕಡೆ ಸಾಗುತ್ತಿದೆ ‘ ಎಂದಿದ್ದಾರೆ.

‘ ನಾವು ಆಸ್ಟ್ರೇಲಿಯನ್ನರು ಕಠಿಣವಾಗಿ ಹಾಗೂ ನ್ಯಾಯಯುತವಾಗಿ ಕ್ರಿಕೆಟ್ ಆಟವನ್ನು ಆಡಲು ಬಯಸುತ್ತೇವೆ. ಆಸೀ ಅಭಿಮಾನಿಗಳೂ ಸಹ ನಮ್ಮಿಂದ ಅದನ್ನೇ ನಿರೀಕ್ಷಿಸುತ್ತಾರೆ ‘ ಎಂದು ಪಂಟರ್ ಹೇಳಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com