ಮುಂದಿನ ವರ್ಷ ಆನ್‌ಲೈನ್‌ನಲ್ಲೂ ಸಿಗಲಿವೆ ಪತಂಜಲಿ ಬಟ್ಟೆಗಳು …!!

ದೆಹಲಿ : ಯೋಗಗುರು, ಪತಂಜಲಿ ಸಂಸ್ಥೆಯ ಸಂಸ್ಥಾಪಕ ಬಾಬಾ ರಾಂ ದೇವ್‌ ಮಹತ್ವದ ಘೋಷಣೆ ಮಾಡಿದ್ದು, ಮುಂದಿನ ವರ್ಷ ಪತಂಜಲಿ ಸಂಸ್ಥೆ ಜವಳಿ ಉದ್ಯಮಕ್ಕೆ ಕಾಲಿಡಲಿದೆ.

ಗೋವಾ ಫೆಸ್ಟ್‌ 2018ರಲ್ಲಿ ಮಾತನಾಡಿರುವ ಬಾಬಾ ರಾಂದೇವ್, ದೇಶದ ಜನರೆಲ್ಲರೂ ಪತಂಜಲಿ ಜೀನ್ಸ್‌ ಯಾವಾಗ ಬರುತ್ತದೆ ಎಂದು ಕೇಳುತ್ತಲೇ ಇದ್ದಾರೆ. ಮುಂದಿನ ವರ್ಷ, ಮಕ್ಕಳು, ಮಹಿಳೆಯರು, ಪುರುಷರಿಗೆ ಎಲ್ಲಾ ಬಟ್ಟೆಗಳೂ ಮಾರುಕಟ್ಟೆಗೆ ಬರಲಿದೆ. ಮೊದಲ ವರ್ಷ ಕಂಪನಿ 5 ಸಾವಿರ ಕೋಟಿ ವಹಿವಾಟಿನ ಗುರಿ ಹೊಂದಿರುವುದಾಗಿ ಹೇಳಿದ್ದಾರೆ.

ಕೈ ಮಗ್ಗದ ಉಡುಪುಗಳ ಜೊತೆ ಮಷಿನ್‌ನಲ್ಲಿ ಸಿದ್ದವಾದ ಬಟ್ಟೆಗಳನ್ನೂ ಕಂಪನಿ ಮಾರಾಟ ಮಾಡಲಿದೆ. ಬಟ್ಟೆ ಅಂಗಡಿಗೆ ಪರಿದಾನ್‌ ಎಂದು ಹೆಸರಿಡಲು ನಿರ್ಧರಿಸಲಾಗಿದೆ. ಆರಂಭದಲ್ಲಿ 250 ಮಳಿಗೆಗಳನ್ನು ತೆರೆಯಲು ನಿರ್ಧರಿಸಲಾಗಿದ್ದು. ಬಿಗ್‌ಬಜಾರ್‌ನಂತಹ ಸಂಸ್ಥೆಯ ಜೊತೆ ಆನ್‌ಲೈನ್‌ನಲ್ಲಿ ಸಹ ಬಟ್ಟೆ ಸಿಗಲಿದೆ. ಈ ಸಲುವಾಗಿ ಗೂಗಲ್‌ ಹಾಗೂ ಫೇಸ್‌ಬುಕ್‌ ಜೊತೆ ಪತಂಜಲಿ ಸಂಸ್ಥೆ ಒಪ್ಪಂದ ಮಾಡಿಕೊಂಡಿದೆ.

Leave a Reply

Your email address will not be published.