ಲಾಲೂ ಪುತ್ರನಿಗೆ ಕಂಕಣ ಭಾಗ್ಯ : ಶಾಸಕಿಯ ಪುತ್ರಿ ಜೊತೆ ತೇಜ್ ಪ್ರತಾಪ್ ವಿವಾಹ ನಿಶ್ಚಯ

ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲೂ ಪ್ರಸಾದ್ ಯಾದವ್ ಪುತ್ರ ತೇಜ್ ಪ್ರತಾಪ್ ಗೆ ಕಂಕಣ ಭಾಗ್ಯ ಕೂಡಿ ಬಂದಿದೆ. ಬಿಹಾರದಲ್ಲಿ ಆರ್ ಜೆಡಿ ಪಕ್ಷದ ಪರವಾಗಿ 6 ಬಾರಿ ಶಾಸಕಿಯಾಗಿ ಆಯ್ಕೆಯಾಗಿದ್ದ ಚಂದ್ರಿಕಾ ರಾಯ್ ಅವರ ಪುತ್ರಿ ಐಶ್ವರ್ಯಾ ಜೊತೆ ತೇಜ್ ಪ್ರತಾಪ್ ವಿವಾಹವನ್ನು ನಿಶ್ಚಯಿಸಲಾಗಿದೆ.

ಬಿಹಾರದ ಮಾಜಿ ಮುಖ್ಯಮಂತ್ರಿ ದರೋಗಾ ಪ್ರಸಾದ್ ರಾಯ್ ಮೊಮ್ಮಗಳಾದ ಐಶ್ವರ್ಯಾ, ದೆಹಲಿ ವಿಶ್ವವಿದ್ಯಾಲಯದಲ್ಲಿ ಇತಿಹಾಸ ವಿಷಯದಲ್ಲಿ ಪದವಿಯನ್ನು ಪಡೆದಿದ್ದಾರೆ. ಈ ತಿಂಗಳ ಕೊನೆಯಲ್ಲಿ ಐಶ್ವರ್ಯಾ – ತೇಜ್ ಪ್ರತಾಪ್ ನಿಶ್ಚಿತಾರ್ಥ ನಡೆಯಲಿದ್ದು, ಮುಂದಿನ ತಿಂಗಳು ವಿವಾಹ ಸಮಾರಂಭ ನಡೆಯಲಿದೆ.

ತಮ್ಮ ಇಬ್ಬರು ಗಂಡು ಮಕ್ಕಳಾದ ತೇಜ್ ಪ್ರತಾಪ್ ಹಾಗೂ ತೇಜಸ್ವಿ ಯಾದವ್ ಮದುವೆಗಾಗಿ ಹೆಣ್ಣು ನೋಡುವುತ್ತಿರುವುದಾಗಿ ಲಾಲೂ ಪತ್ನಿ ರಾಬ್ಡಿ ದೇವಿ ಕೆಲವು ತಿಂಗಳುಗಳ ಹಿಂದೆ ಹೇಳಿದ್ದರು.

Leave a Reply

Your email address will not be published.

Social Media Auto Publish Powered By : XYZScripts.com