35 ವರ್ಷಗಳ ಬಳಿಕ ಸೌದಿ ಅರೇಬಿಯಾದ ಜನರಿಗೆ ಒದಗಿ ಬಂತು ಸಿನಿಮಾ ನೋಡುವ ಅವಕಾಶ !

ರಿಯಾದ್‌ : ಸೌದಿ ಅರೇಬಿಯಾದಲ್ಲಿ  35 ವರ್ಷಗಳ ಬಳಿಕ ಮೊದಲ ಬಾರಿಗೆ ಚಿತ್ರಮಂದಿರ ತಲೆ ಎತ್ತಲಿದ್ದು, ಏಪ್ರಿಲ್‌ 18ರಂದು ಚಿತ್ರ ಪ್ರದರ್ಶನಗೊಳ್ಳಲಿದೆ.

ದೇಶದ ಆರ್ಥಿಕ ಸ್ಥಿತಿ, ಮಹಿಳೆಯರಿಗೆ ಸಮಾನ ಹಕ್ಕು ನೀಡುವಲ್ಲಿ ಪ್ರೋತ್ಸಾಹಿಸುತ್ತಿರುವ ಸೌದಿ ರಾಜ ಮೊಹಮ್ಮದ್‌ ಬಿನ್‌ ಸಲ್ಮಾನ್‌ ಈ ಮತ್ತೊಂದು ಹೆಜ್ಜೆ ಮುಂದಿಟ್ಟಿದ್ದು, ಚಿತ್ರ ಪ್ರದರ್ಶನಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ.

1970ರ ದಶಕದಲ್ಲಿ ಸೌದಿಯಲ್ಲಿ ಚಿತ್ರಮಂದಿರಗಳಿದ್ದವು. ಆದರೆ ಮೌಲ್ವಿಗಳ ದಬ್ಬಾಳಿಕೆಯ ಕಾರಣ ಎಲ್ಲಾ ಥಿಯೇಟರ್‌ಗಳು ಬಾಗಿಲು ಮುಚ್ಚಿದ್ದು, ಅಂದಿನಿಂದ ಇಲ್ಲಿಯವರೆಗೂ ಯಾವುದೇ ಸಿನಿಮಾ ಪ್ರಸಾರವಾಗಿರಲಿಲ್ಲ. ಆದರೆ ಈಗ ಸೌದಿ ರಾಜನಿಂದಾಗಿ ಅಮೆರಿಕದ ಎಮ್ಸಿ ಎಂಟರ್‌ಟೈನ್‌ಮೆಂಟ್‌ ಸಿನಿಮಾ ಸರಣಿಗೆ ಚಿತ್ರಮಂದಿರದ ಬಾಗಿಲು ತೆರೆಯಲು ಅವಕಾಶ ಮಾಡಿಕೊಡಲಾಗಿದೆ.

ಮುಂದಿನ 5 ವರ್ಷಗಳಲ್ಲಿ 15 ನಗರದಲ್ಲಿ 40ಕ್ಕೂ ಅಧಿಕ ಸಿನಿಮಾ ಥಿಯೇಟರ್‌ ತೆಗೆಯಲು ನಿರ್ಧರಿಸಲಾಗಿದೆ. ಮಹಿಳೆಯರು, ಪುರುಷರೆನ್ನದೆ ಯಾರು ಬೇಕಾದರೂ ಸಿನಿಮಾ ನೋಡಬಹುದಾಗಿದೆ.

Leave a Reply

Your email address will not be published.

Social Media Auto Publish Powered By : XYZScripts.com