ಕೃಷ್ಣ ಮೃಗ ಬೇಟೆ ಪ್ರಕರಣ : ಸಲ್ಮಾನ್ ಖಾನ್‌ ದೋಷಿ, ಉಳಿದ ಕಲಾವಿದರಿಗೆ ರಿಲೀಫ್‌

ಜೋಧ್‌ಪುರ : 20 ವರ್ಷಗಳ ಹಿಂದೆ ಬಾಲಿವುಡ್‌ ನಟ ಸಲ್ಮಾನ್ ಖಾನ್‌ ಹಾಗೂ ಇತರೆ ನಟರ ವಿರುದ್ದ ದಾಖಲಾಗಿದ್ದ ಕೃಷ್ಣಮೃಗ ಬೇಟೆ ಪ್ರಕರಣ ಸಂಬಂಧ ಇಂದು ನ್ಯಾಯಾಲಯ ತೀರ್ಪು ಪ್ರಕಟಿಸಿದ್ದು, ಸಲ್ಮಾನ್ ಖಾನ್ ದೋಷಿ ಎಂದಿದೆ.
ಇಂದು ಜೋದ್ಪುರ ನ್ಯಾಯಾಲಯ ಈ ಪ್ರಕರಣ ಸಂಬಂಧ ತೀರ್ಪು ಪ್ರಕಟಿಸಿದೆ. ಹಮ್‌ ಸಾಥ್‌ ಸಾಥ್‌ ಹೇ ಚಿತ್ರದ ಚಿತ್ರೀಕರಣ ಸಂದರ್ಭದಲ್ಲಿ ನಡೆದಿದ್ದ ಬೇಟೆ ಪ್ರಕರಣ ಇದಾಗಿದ್ದು. ಸಲ್ಮಾನ್‌ ಜೊತೆ ಸೈಫ್ ಅಲಿ ಖಾನ್‌. ಟಬು, ಸೊನಾಲಿ ಬೇಂದ್ರೆ, ನೀಲಂ ಅವರ ವಿರುದ್ದವೂ ಪ್ರಕರಣ ದಾಖಲಾಗಿತ್ತು. ಇಂದು ಎಲ್ಲಾ ಆರೋಪಿಗಳೂ ಜೋದ್ಪುರ ನ್ಯಾಯಾಲಯಕ್ಕೆ ಆಗಮಿಸಿದ್ದು, ಈ ಸಂದರ್ಭದಲ್ಲಿ ತೀರ್ಪು ಪ್ರಕಟಿಸಿದ ನ್ಯಾಯಾಲಯ ಸಲ್ಮಾನ್‌ ಖಾನ್‌ ದೋಷಿ ಎಂದಿದ್ದು, ಇತರೆ ಆರೋಪಿಗಳನ್ನು ಖುಲಾಸೆಗೊಳಿಸಿದೆ.


ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ದಾಖಲಾಗಿದ್ದ ಪ್ರಕರಣವನ್ನು ಮುಖ್ಯ ನ್ಯಾಯಮೂರ್ತಿ ದೇಲ್‌ ಕುಮಾರ್‌ ಖಾತ್ರಿ ವಿಚಾರಣೆ ನಡೆಸಿ, ತೀರ್ಪು ನೀಡಿದ್ದಾರೆ.
ಸಲ್ಮಾನ್‌ ಖಾನ್‌ ಹಾಗೂ ತಂಡ ಚಿತ್ರೀಕರಣಕ್ಕೆಂದು ರಾಜಸ್ಥಾನದಲ್ಲಿ ತಂಗಿದ್ದರು. ಈ ವೇಳೆ ರಾತ್ರಿ ಕಾರಿನಲ್ಲಿ ತೆರಳುತ್ತಿದ್ದ ವೇಳೆ ಕೃಷ್ಣ ಮೃಗಗಳ ಗುಂಪು ಕಾಣಿಸಿದ್ದು, ಡ್ರೈವರ್‌ ಸೀಟಿನಲ್ಲಿದ್ದ ಸಲ್ಮಾನ್‌ ಗುಂಡು ಹಾರಿಸಿದ್ದರು. ಈ ವೇಳೆ ಎರಡು ಕೃಷ್ಣಮೃಗಗಳು ಸಾವಿಗೀಡಾಗಿದ್ದವು.

Leave a Reply

Your email address will not be published.

Social Media Auto Publish Powered By : XYZScripts.com