ಕಾಶ್ಮೀರ ಬಗ್ಗೆ ಟ್ವೀಟ್ : ಅಫ್ರಿದಿಗೆ ತಿರುಗೇಟು ನೀಡಿದ ಕ್ರಿಕೆಟಿಗರು ಹೇಳಿದ್ದೇನು.?

ಕಾಶ್ಮೀರ ಗಡಿ ವಿವಾದದ ಬಗ್ಗೆ ಟ್ವೀಟ್ ಮಾಡಿದ್ದ ಪಾಕ್ ಆಲ್ರೌಂಡರ್ ಶಾಹಿದ್ ಅಪ್ರಿದಿಗೆ ಟೀಮ್ ಇಂಡಿಯಾದ ಮಾಜಿ, ಹಾಲಿ ಕ್ರಿಕೆಟಿಗರು ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ‘ ಭಾರತಕ್ಕೆ ತನ್ನ ಆಂತರಿಕ ಸಮಸ್ಯೆಗಳನ್ನು ಹೇಗೆ ನಿಭಾಯಿಸಬೇಕೆಂದು ಚೆನ್ನಾಗಿ ಗೊತ್ತಿದೆ. ವಿದೇಶಿಗರು ಈ ಬಗ್ಗೆ ಮಾತನಾಡುವ ಅಗತ್ಯವಿಲ್ಲ ‘ ಎಂದು ಹೇಳಿದ್ದಾರೆ.

ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ‘ ಕಾಶ್ಮೀರ ಬಗ್ಗೆ ಶಾಹಿದ್ ಅಫ್ರಿದಿ ಹೇಳಿಕೆ ಅವರ ವೈಯಕ್ತಿಕ ಅಭಿಪ್ರಾಯ. ದೇಶದ ಹಿತಾಸಕ್ತಿಗೇ ನನ್ನ ಮೊದಲ ಆದ್ಯತೆ, ದೇಶದ ಹಿತಾಸಕ್ತಿಗೆ ವಿರುದ್ಧವಾದ ಎಲ್ಲವನ್ನು ನಾನು ವಿರೋಧಿಸುತ್ತೇನೆ ‘ ಎಂದಿದ್ದಾರೆ.

ಟ್ವೀಟ್ ಮಾಡಿರುವ ಸುರೇಶ್ ರೈನಾ ‘ ಕಾಶ್ಮೀರ ಭಾರತದ ಅವಿಭಾಜ್ಯ ಅಂಗವಾಗಿದೆ. ಮುಂದೆಯೂ ಆಗಿರಲಿದೆ. ಅದು ನನ್ನ ಪೂರ್ವಜರು ಜನಿಸಿದ ಪುಣ್ಯಭೂಮಿಯಾಗಿದೆ. ಪಾಕಿಸ್ತಾನ ಸೇನೆಗೆ ಕಾಶ್ಮೀರದಲ್ಲಿ ಭಯೋತ್ಪಾದನೆಗೆ ಕುಮ್ಮಕ್ಕು ನೀಡುವುದನ್ನು ನಿಲ್ಲಿಸುವಂತೆ ಅಪ್ರಿದಿ ಹೇಳಲಿ, ನಮಗೂ ಶಾಂತಿ ನೆಲೆಸುವುದೇ ಬೇಕಾಗಿದೆ, ಹಿಂಸೆ ಹಾಗೂ ರಕ್ತಪಾತ ಅಲ್ಲ ‘ ಎಂದಿದ್ದಾರೆ.

ಮಾಜಿ ಕ್ರಿಕೆಟಿಗ ಮೊಹಮ್ಮದ್ ಕೈಫ್ ‘ ನಾವು ಕೂಡ ಶಾಂತಿಯನ್ನೇ ಬಯಸುತ್ತೇವೆ, ಆದರೆ ಎರಡೂ ಕಡೆಯವರು ಬಯಸಿದಾಗ ಮಾತ್ರ ಶಾಂತಿ ಸಾಧ್ಯವಾಗುತ್ತದೆ ‘ ಎಂದು ಹೇಳಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com