H.D ಕುಮಾರಸ್ವಾಮಿ ಏನು ಸತ್ಯ ಹರಿಶ್ಚಂದ್ರ ಅಲ್ಲ : C.P ಯೋಗೇಶ್ವರ್‌

ರಾಮನಗರ : ಚನ್ನಪಟ್ಟಣದಲ್ಲಿ ಹೆಚ್ ಡಿ ಕೆ ಸ್ಪರ್ಧಿಸುವ ವಿಚಾರ ಸಂಬಂಧ  ಸಿ.ಪಿ.ಯೋಗೇಶ್ವರ್ ಹೇಳಿಕೆ ನೀಡಿದ್ದಾರೆ. ಹೆಚ್ ಡಿ ಕೆ ಸ್ಪರ್ಧೆಯನ್ನು ಕ್ರೀಡಾ ಮನೋಭಾವದಿಂದ ಸ್ವಾಗತಿಸುತ್ತೇನೆ. ಎರಡು ಕಡೆ ಸ್ಪರ್ಧೆ ವಿಚಾರದಲ್ಲಿ ಚರ್ಚೆ ನಡೆಯುತ್ತಿದೆ. ಈ ಬಗ್ಗೆ ಸುಪ್ರೀಂ ಕೋರ್ಟ್ ನಲ್ಲಿ ಪಿ ಐ ಲ್ ಸಲ್ಲಿಕೆಯಾಗಿದೆ. ಹೆಚ್ ಡಿ ಕೆ ಚನ್ನಪಟ್ಟಣ ಕ್ಷೇತ್ರದಲ್ಲಿ ಸ್ಪರ್ಧೆ ನಡೆಸಲಿ. ಎರಡು ಕ್ಷೇತ್ರದಲ್ಲಿ ಸ್ಪರ್ಧಿಸಿ ಜನರಿಗೆ ಹೊರೆ ಮಾಡುವುದು ಬೇಡ ಎಂದಿದ್ದಾರೆ.

ಎರಡು ಕ್ಷೇತ್ರದಲ್ಲಿ ಸ್ಪರ್ಧಿಸುವ ಬದಲು ನನ್ನ ವಿರುದ್ಧ ಸ್ಪರ್ಧಿಸಲಿ ಎಂದಿರುವ ಯೋಗೇಶ್ವರ್‌, ಕುಮಾರಸ್ವಾಮಿಯನ್ನು ಎದುರಿಸಲು ನಾನು ಸಿದ್ಧವಾಗಿದ್ದೇನೆ. ಹೆಚ್ ಡಿ ಕೆಯಿಂದ ಭಾವನಾತ್ಮಕ ರಾಜಕೀಯ ನಡೆಯುತ್ತಿದೆ.  ಜಾತಿ ಹೆಸರಲ್ಲಿ ಮತದಾರರನ್ನು ಸೆಳೆಯುತ್ತಿದ್ದಾರೆರಾಮನಗರ ಕ್ಷೇತ್ರಕ್ಕೆ ಭೇಟಿ ನೀಡುವುದಿಲ್ಲ. ಅತಿಥಿ ಉಪನ್ಯಾಸಕನಂತೆ ರಾಮನಗರ ಬರುತ್ತಾರೆ. ಕಳೆದ ಹತ್ತು ವರ್ಷದಿಂದ ಕ್ಷೇತ್ರ ಗುಲಾಮಗಿರಿಯಲ್ಲಿದೆ. ರಾಮನಗರ ಜನತೆ ಹೆಚ್ ಡಿ ಕೆ ವಿಚಾರದಲ್ಲಿ ಬೇಸತ್ತಿದ್ದಾರೆ. ನನ್ನ ವಿರುದ್ಧ ಸುಳ್ಳು ಆರೋಪ ಮಾಡುತ್ತಿದ್ದಾರೆ. ಕಮಿಷನ್, ದುರಾಹಂಕರದಿಂದ ವರ್ತಿಸುತ್ತೇನೆ ಎಂದು ಹೇಳಿದ್ದಾರೆ. ಭಾವನಾತ್ಮಕ ಬ್ಲ್ಯಾಕ್ ಮೇಲ್ ಹೆಚ್ ಡಿ ಕೆ ಗೆ ಹೊಸದಲ್ಲ ಎಂದಿದ್ದಾರೆ.

 

ಕುಮಾರಸ್ವಾಮಿ ಸತ್ಯ ಹರಿಶ್ಚಂದ್ರ ಅಲ್ಲ.  ಚನ್ನಪಟ್ಟಣ ತಾಲೂಕನ್ನ ಒಡೆದು ಆಳುವ ನೀತಿ ಮಾಡುತ್ತಿದ್ದಾರೆ. ಬಿಜೆಪಿಯಿಂದ ನನಗೆ ಟಿಕೇಟ್ ದೊರೆಯಲಿದೆಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಲ್ಲಿ ಸಚಿವನಾಗುತ್ತೇನೆ. ಎಚ್ ಡಿ ಕೆ ಮುಖ್ಯಮಂತ್ರಿ ಅಂತಾ ಓಡಾಡ್ತಿದ್ದಾರೆ. ಅವರು ಮುಖ್ಯ ಮಂತ್ರಿಯಾಗುತ್ತಾರೋ ಇಲ್ವೋ ನಾನು ಸಚಿವನಾಗುವುದಾಗಿ ಹೇಳಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com