ಪಿಂಚಣಿ ಆಸೆಗಾಗಿ ತಾಯಿಯ ಮೃತದೇಹವನ್ನೇ ವರ್ಷಗಟ್ಟಲೆ ಫ್ರಿಡ್ಜ್‌ನಲ್ಲಿಟ್ಟ ಮಗ…!!

ಕೋಲ್ಕತ್ತಾ : ನಿಧನರಾಗಿದ್ದ ತಾಯಿಯ ಮೃತದೇಹವನ್ನು ಮಗನೊಬ್ಬ ಪ್ರಿಡ್ಜ್‌ನಲ್ಲಿಟ್ಟಿದ್ದ ಘಟನೆ ಕೋಲ್ಕತ್ತಾದಲ್ಲಿ ಬೆಳಕಿಗೆ ಬಂದಿದೆ.
ಕೋಲ್ಕತ್ತಾದ ಬೆಹೆಲಾ ಪ್ರದೇಶದ ಮನೆಯ ಫ್ರಿಡ್ಜ್‌ನಲ್ಲಿದ್ದ ಮಹಿಳೆಯ ದೇಹವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.  ಮೂಲಗಳ ಪ್ರಕಾರ ಕಳೆದ ಕಳೆದ ಎರಡು ವರ್ಷಗಳಿಂದ ತಾಯಿಯ ಶವವನ್ನು ಮಗನೇ ಫ್ರಿಡ್ಜ್‌ನಲ್ಲಿಟ್ಟು ಆಕೆಗೆ ಬರುತ್ತಿದ್ದ ಪಿಂಚಣಿ ಪಡೆಯುತ್ತಿದ್ದ ಎನ್ನಲಾಗಿದೆ.
ತಾಯಿ ಬಿನಾ ಸರ್ಕಾರಿ ಉದ್ಯೋಗಿಯಾಗಿದ್ದು, ನಿವೃತ್ತಿಯ ಬಳಿಕ ಪಿಂಚಣಿ ದೊರೆಯುತ್ತಿತ್ತು. ಆ ಹಣದಲ್ಲೇ ಪತಿ ಹಾಗೂ ಮಗನ ಜೊತೆ ಜೀವನ ಸಾಗಿಸುತ್ತಿದ್ದಳು. 2015ರಲ್ಲಿ ಬಿನಾ ಹೃದಯಾಘಾತದಿಂದ ಮೃತಪಟ್ಟಿದ್ದರು. ಆದರೆ ತಾಯಿಯ ದೇಹವನ್ನು ಅಂತ್ಯ ಸಂಸ್ಕಾರ ಮಾಡುವುದನ್ನು ಬಿಟ್ಟು ದೇಹವನ್ನು ತಂದು ಮನೆ ಫ್ರಿಡ್ಜ್‌ನಲ್ಲಿಟ್ಟಿದ್ದ. ಅಲ್ಲದೆ ಆತನ ಕೃತ್ಯಕ್ಕೆ ತಂದೆ ಸಹ ಸಾಥ್ ನೀಡಿದ್ದಾಗಿ ತಿಳಿದುಬಂದಿದೆ.
ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತಂದೆ ಹಾಗೂ ಮಗ ಇಬ್ಬರನ್ನೂ ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

Leave a Reply

Your email address will not be published.