ಮಹಿಳಾ ಶೌಚಾಲಯದೊಳಗೆ ನುಗ್ಗಿ ಮೂತ್ರ ವಿಸರ್ಜನೆ ಮಾಡಿದ ಪೋಲಿ ಪೊಲೀಸಪ್ಪ !

ಮೈಸೂರು : ಪೋಲಿ ಪೊಲೀಸನೊಬ್ಬ ಮೈಸೂರಿನ ಮಹಿಳಾ ಶೌಚಾಲಯಕ್ಕೆ ತೆರಳಿ ಮೂತ್ರ ವಿಸರ್ಜನೆ ಮಾಡಿರುವ ಸಂಗತಿ ಬೆಳಕಿಗೆ ಬಂದಿದೆ.
ಮೈಸೂರಿನ ಗ್ರಾಮಾಂತರ ಬಸ್‌ ನಿಲ್ದಾಣದಲ್ಲಿ ಪುರುಷರ ಶೌಚಾಲಯವಿದ್ದರೂ ಅದನ್ನು ಬಳಸದೆ ಮಹಿಳಾ ಶೌಚಾಲಯದೊಳಗೆ ಹೋಗಿದ್ದಾರೆ. ಇನ್ಸ್‌ಪೆಕ್ಟ್‌ ಈ ವರ್ತನೆ ಮೊಬೈಲ್‌ನಲ್ಲಿ ಸೆರೆಯಾಗಿದೆ. ಸಾರ್ವಜನಿಕ ಸ್ಥಳದಲ್ಲಿ ಪೊಲೀಸ್‌ ಇನ್ಸ್‌ಪೆಕ್ಟರ್‌ ಅಸಭ್ಯವಾಗಿ ವರ್ತಿಸಿದ್ದಾರೆ. ಸಮವಸ್ತ್ರ ಧರಿಸಿಯೇ ಮಹಿಳೆಯರ ಶೌಚಾಲಯದೊಳಗೆ ಹೋಗಿ ಬಂದು ಬಳಿಕ ಶೌಚಾಲಯದ ನಿರ್ವಹಣೆ ಮಾಡುವ ಮಹಿಳೆಯ ಬಳಿ ಉಡಾಫೆಯ ಉತ್ತರ ನೀಡಿದ್ದಾನೆ.
ಈ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದ್ದು. ಸಾರ್ವಜನಿಕ ಸ್ಥಳಗಳಲ್ಲಿ ಅಧಿಕಾರಿಯೊಬ್ಬ ಈ ರೀತಿ ವರ್ತನೆ ತೋರಿರುವುದು ನಾಚಿಕೆಯ ಸಂಗತಿ ಎಂದು ಸಾರ್ವಜನಿಕವಾಗಿ ಆಕ್ಷೇಪ ವ್ಯಕ್ತವಾಗುತ್ತಿದೆ.

Leave a Reply

Your email address will not be published.

Social Media Auto Publish Powered By : XYZScripts.com