ಅನೈತಿಕ ಪೊಲೀಸ್‌ಗಿರಿ : ಅನ್ಯಕೋಮಿನ ಯುವಕರ ಅರೆಬೆತ್ತಲೆ ಮಾಡಿ ಥಳಿತ

ಮಡಕೇರಿ : ಹಿಂದೂ ಯುವತಿ ಜೊತೆ ಅನ್ಯಕೋಮಿನ ಯುವಕರು ಅಸಭ್ಯವಾಗಿ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿ ಸ್ಥಳೀಯರು ಇಬ್ಬರು ಯುವಕರ ಮೇಲೆ ಹಲ್ಲೆ ಮಾಡಿರುವ ಘಟನೆ ಕೊಡಗು ಜಿಲ್ಲೆಯ ಮಡಕೇರಿ ತಾಲ್ಲೂಕಿನ ಕೋರಂಗಾಲದಲ್ಲಿ ನಡೆದಿದೆ.


ಕಳೆದ ಎರಡು ದಿನಗಳ ಹಿಂದೆ ನಡೆದಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಭಾಗಮಂಡಲದ ಕಾವೇರಿ ನದಿ ತೀರದಲ್ಲಿ ಇಬ್ಬರು ಯುವಕರು, ಇಬ್ಬರು ವಿದ್ಯಾರ್ಥಿನಿಯರು ಅಸಭ್ಯವಾಗಿ ವರ್ತಿಸುತ್ತಿದ್ದರು ಎಂದು ಆರೋಪ ಹೊರಿಸಲಾಗಿದ್ದು, ಯುವಕ ಯುವತಿಯರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಇಬ್ಬರು ಯುವಕರಲ್ಲಿ ಒಬ್ಬ ಯುವಕ ತನ್ನದೇ ಕೋಮಿನ ಯುವತಿಯನ್ನು ಪ್ರೀತಿಸುತ್ತಿದ್ದ. ಆಕೆಯನ್ನು ನೋಡಲು ತನ್ನ ಸ್ನೇಹಿತನೊಂದಿಗೆ ಬಂದಿದ್ದು, ಇಬ್ಬರೂ ಅಸಭ್ಯವಾಗಿ ವರ್ತಿಸುತ್ತಿದ್ದರು ಎಂದು ಆರೋಪಿಸಿ ಯುವಕರಿಬ್ಬರಿಗೆ ಥಳಿಸಲಾಗಿದೆ, ಬಳಿಕ ನಾಲ್ವರನ್ನು ಬಾಗಮಂಡಲ ಪೊಲೀಸ್‌ ಠಾಣೆಗೆ ಒಪ್ಪಿಸಿದ್ದು, ರಾಜಿ ಸಂಧಾನದ ಮೂಲಕ ಪ್ರಕರಣವನ್ನು ಕೈಬಿಡಲಾಗಿದೆ ಎಂದು ತಿಳಿದುಬಂದಿದೆ.

Leave a Reply

Your email address will not be published.