22ನೇ ವಸಂತಕ್ಕೆ ಕಾಲಿಟ್ಟ ಚಮಕ್‌ ಚೆಲುವೆ: ರಶ್ಮಿಕಾ ಮನೆಯಲ್ಲಿ ಕಿರಿಕ್‌ ಪಾರ್ಟಿಗಳಿಂದ ಸೆಲೆಬ್ರೇಷನ್‌

ಬೆಂಗಳೂರು : ಕಿರಿಕ್‌ ಪಾರ್ಟಿ ಸಿನಿಮಾದ ಸಾನ್ವಿ ಪಾತ್ರಧಾರಿಯಾಗಿ ಕನ್ನಡಿಗರ ಮನಗೆದ್ದು ಈಗ ತೆಲುಗು ಸಿನಿಮಾದಲ್ಲೂ ನಟಿಸುತ್ತಿರುವ ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ಇಂದು 22ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ.
ಚಿತ್ರರಂಗಕ್ಕೆ ಬಂದ ಎರಡೇ ವರ್ಷದಲ್ಲಿ ಲಕ್ಷಾಂತರ ಮಂದಿ ಅಭಿಮಾನಿಗಳನ್ನು ಗೆದ್ದುಕೊಂಡಿರುವ ರಶ್ಮಿಕಾ ಇಂದು ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ನಿನ್ನೆ ರಾತ್ರಿಯಿಂದಲೇ ರಶ್ಮಿಕಾ ಹುಟ್ಟುಹಬ್ಬವನ್ನು ಕಿರಿಕ್‌ ಪಾರ್ಟಿ ಚಿತ್ರತಂಡ ಸೆಲೆಬ್ರೇಟ್‌ ಮಾಡಿದ್ದು, ರಶ್ಮಿಕಾ ಮನೆಯಲ್ಲಿ ಹುಟ್ಟುಹಬ್ಬವನ್ನು ಆಚರಿಸಿದ್ದಾರೆ.


ರಕ್ಷಿತ್ ಶೆಟ್ಟಿ, ರಿಷಬ್‌ ಶೆಟ್ಟಿ ಸೇರಿದಂತೆ ಅನೇಕ ತಾರೆಯರು ರಶ್ಮಿಕಾಗೆ ಹುಟ್ಟುಹಬ್ಬದ ಶುಭಾಷಯ ಕೋರಿದ್ದಾರೆ.
ರಶ್ಮಿಕಾ ಸದ್ಯ ಬಹುಬೇಡಿಕೆಯ ನಟಿಯಾಗಿದ್ದು, ಟಾಲಿವುಡ್‌ನ ಚಿರಂಜೀವಿ ಅವರ ಸಿನಿಮಾದಲ್ಲೂ ನಟಿಸುತ್ತಾರೆ ಎಂಬ ಮಾತು ಕೇಳಿಬರುತ್ತಿದೆ. ರಶ್ಮಿಕಾಗೆ ಭಾವೀ ಪತಿ ರಕ್ಷಿತ್‌ ಏನು ಗಿಪ್ಟ್ ನೀಡಿದ್ದಾರೆ ಎಂಬ ಕುತೂಹಲ ಹೆಚ್ಚಿದ್ದು, ಸಂಜೆಯ ವೇಳೆಗೆ ಈ ಬಗ್ಗೆ ಮಾಹಿತಿ ತಿಳಿಯಲಿದೆ.

 

Leave a Reply

Your email address will not be published.

Social Media Auto Publish Powered By : XYZScripts.com