HDK ಭೇಟಿ ಆಯ್ತು…ಈಗ CM ಭೇಟಿ ಮಾಡಿದ ಕಿಚ್ಚ…ಕುತೂಹಲ ಕೆರಳಿಸಿದೆ ಸುದೀಪ್‌ ನಡೆ

ಬೆಂಗಳೂರು : ಕರ್ನಾಟಕ ವಿಧಾನಸಭೆಯ ಚುನಾವಣೆಗೆ ದಿನಗಳು ಹತ್ತಿರವಾಗುತ್ತಿದ್ದಂತೆ ಚುನಾವಣೆಯ ಬಿಸಿ ಹೆಚ್ಚುತ್ತಿದೆ. ಈ ಮಧ್ಯೆ ಕನ್ನಡ ಸಿನಿಮಾ ತಾರೆಯರೂ ಪ್ರಚಾರ ಕಾರ್ಯದಲ್ಲಿ ತೊಡಗಿಕೊಳ್ಳುತ್ತಿದ್ದಾರೆ. ಅಲ್ಲದೆ ಪ್ರಚಾರ ಅಥವಾ ಪಕ್ಷಕ್ಕೆ ಸೇರ್ಪಡೆಯಾಗುವುದರ ಕುರಿತು ಕಿಚ್ಚ ಸುದೀಪ್‌ ಹೆಸರು ಮೊದಲ ಪಟ್ಟಿಯಲ್ಲಿದೆ.


ಇತ್ತೀಚೆಗಷ್ಟೇ ಜೆಡಿಎಸ್‌ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಅವರನ್ನು ಭೇಟಿಯಾಗಿದ್ದ ಕಿಚ್ಚ ಸುದೀಪ್‌ ಈಗ ಮತ್ತೆ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ್ದಾರೆ. ಇಂದು ಬೆಳಗ್ಗೆ ಸಿಎಂ ಸಿದ್ದರಾಮಯ್ಯ ಅವರ ಅಧಿಕೃತ ನಿವಾಸದಲ್ಲಿ ಭೇಟಿಯಾಗಿದ್ದು, ಭಾರೀ ಕುತೂಹಲ ಮೂಡಿಸಿದೆ.
ಚುನಾವಣೆ ವೇಳೆ ಈ ರೀತಿಯ ಭೇಟಿ ಎಲ್ಲರಿಗೂ ಅಚ್ಚರಿ ಮೂಡಿಸಿದ್ದು, ಕಿಚ್ಚನ ನಡೆ ಏನಿರಬಹುದು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಕಿಚ್ಚ ಕಾಂಗ್ರೆಸ್‌ ಪಕ್ಷ ಸೇರ್ತಾರಾ, ಅಥವಾ ಕಾಂಗ್ರೆಸ್‌ ಪರ ಪ್ರಚಾರ ಮಾಡುತ್ತಾರಾ, ಇಲ್ಲವೇ ಜೆಡಿಎಸ್‌ ಪರ ಪ್ರಚಾರ ಮಾಡುತ್ತಾರಾ…ಇವೆಲ್ಲಾ ಪ್ರಶ್ನೆಗಳಿಗೆ ಸುದೀಪ್‌ ಮಾತ್ರ ಉತ್ತರ ನೀಡಬೇಕಷ್ಟೇ.

Leave a Reply

Your email address will not be published.

Social Media Auto Publish Powered By : XYZScripts.com