ಕಾವೇರಿ ನಿರ್ವಹಣಾ ಮಂಡಳಿಗಾಗಿ ತಮಿಳುನಾಡು ಬಂದ್‌ : ಪ್ರಯಾಣಿಕರ ಪರದಾಟ

ಬೆಂಗಳೂರು : ಕಾವೇರಿ ನಿರ್ವಹಣಾ ಮಂಡಳಿ ರಚಿಸುವಂತೆ ಕೇಂದ್ರಸರ್ಕಾರದ ಮೇಲೆ ಒತ್ತಡ ಹೇರುತ್ತಿರುವ ತಮಿಳುನಾಡು ಇಂದು ತಮಿಳು ಪರ ಸಂಘಟನೆಗಳು, ಪ್ರತಿಪಕ್ಷ ಡಿಎಂಕೆ ಬಂದ್’ಗೆ ಕರೆನೀಡಿವೆ.

ಈ ಹಿನ್ನೆಲೆಯಲ್ಲಿ ಎರಡು ರಾಜ್ಯದ ಸರ್ಕಾರಿ ಸಾರಿಗೆ ಬಸ್ಸುಗಳು ಗಡಿ ದಾಟದಿರುವುದರಿಂದ ಪ್ರಯಾಣಿಕರು ಪರದಾಡುವಂತಾಗಿದೆ. ಕರ್ನಾಟಕ ತಮಿಳುನಾಡು ಗಡಿ ಅತ್ತಿಬೆಲೆಯಲ್ಲಿ ತಮಿಳುನಾಡು ಬಂದ್ ಹಿನ್ನೆಲೆ ksrtc ಬಸ್ ಸಂಚಾರವನ್ನು ತಡೆಹಿಡಿದಿದ್ದು ಕಾರ್ಯ ನಿಮಿತ್ತ ತಮಿಳುನಾಡಿನತ್ತ ಪ್ರಯಾಣಿಸಬೇಕಾದ ಪ್ರಯಾಣಿಕರು ತೊಂದರೆಗೊಳಗಾಗಿದ್ದರೆ. ಎರಡು ರಾಜ್ಯದ ಗಡಿ ಅತ್ತಿಬೆಲೆಯಲ್ಲಿ ಬಸ್ ಇಳಿದು ಸುಮಾರು 2 ಕಿಲೋಮೀಟರ್ ನಡೆದು ಹೋಗುತ್ತಿದ್ದಾರೆ. ಇನ್ನು ಎರಡು ರಾಜ್ಯದ ಪೊಲೀಸರು ಗಡಿಯಲ್ಲಿ ಸೂಕ್ತ ಬಿಗಿಭದ್ರತೆ ನೀಡಿದ್ದು ಅತ್ತಿಬೆಲೆ ಗಡಿಯಲ್ಲಿ ಆನೇಕಲ್ ವೃತ್ತದ ಓರ್ವ ಡಿವೈಎಸ್ಪಿ ಮೂವರು ಸರ್ಕಲ್ ಇನ್’ಸ್ಪೆಕ್ಟರ್ 8 ಎಸೈ 100 ಪೇದೆಗಳು 1 ksrp ಹಾಗೂ 2 ಡಿಆರ್ ಪಡೆಗಳನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ.

ಇನ್ನು ತಮಿಳುನಾಡು ಪೊಲೀಸರು ಇಷ್ಟೇ ಸಂಖ್ಯೆಯಲ್ಲಿ ಭದ್ರತೆ ನೀಡಿದ್ದು ಯಾವುದೇ ಅಹಿತಕರ ಘಟನೆ ನಡೆಯದಂತೆ ಎಚ್ಚರ ವಹಿಸಿದ್ದಾರೆ. ತಮಿಳುನಾಡು ಬಂದ್ ವಿರೋಧಿಸಿ ಅತ್ತಿಬೆಲೆ ಗಡಿಗೆ ಕನ್ನಡಪರ ಸಂಘಟನೆಯ ಅಧ್ಯಕ್ಷ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಹಲವು ಕನ್ನಡ ಪರ ಸಂಘಟನೆಗಳು ಮುತ್ತಿಗೆ ಹಾಕಲು ನಿರ್ಧರಿಸಿವೆ.

Leave a Reply

Your email address will not be published.

Social Media Auto Publish Powered By : XYZScripts.com