ಕೈ ಕಾಲು ಕಟ್ಟಿ, ಚಾಕುವಿನಿಂದ ಇರಿದು ಇಸ್ಕಾನ್ ದೇವಾಲಯದ ಅರ್ಚಕರ ಹತ್ಯೆ !

ಬೆಂಗಳೂರು : ಇಸ್ಕಾನ್‌ ದೇವಾಯದ ಪೂಜಾರಿ ಸಂಜಯ್‌ ಸತೀಶ್ ಎಂಬುವವರನ್ನು ಕೈ ಕಾಲು ಕಟ್ಟಿಹಾಕಿ ಚಾಕುವಿನಿಂದ ಇರಿದು ಕೊಲೆ ಮಾಡಲಾಗಿದೆ.
ಕೆ.ಆರ್‌ ಪುರಂನ ಬೆತ್ತಲ್‌ ನಗರದಲ್ಲಿ ಘಟನೆ ನಡೆದಿದೆ. ಇಸ್ಕಾಲ್‌ ದೇವಾಲಯದಲ್ಲಿ ಅರ್ಚಕರಾಗಿದ್ದ ಸಂಜಯ್ ಅಪಾರ್ಟ್‌ಮೆಂಟ್‌ ಒಂದರಲ್ಲಿ ವಾಸವಾಗಿದ್ದರು. 15 ದಿನಗಳಿಗೊಮ್ಮೆ ಸಂಜಯ್ ಅಪಾರ್ಟ್‌ಮೆಂಟ್‌ನಲ್ಲಿ ಬಂದು ಉಳಿಯುತ್ತಿದ್ದರು. ಅದೇ ರೀತಿ ಕಳೆದ ಬುಧವಾರ ಪೂಜೆ ಮುಗಿಸಿ ಅಪಾರ್ಟ್‌ಮೆಂಟ್‌ಗೆ ಬಂದಿದ್ದರು.


ಈ ವೇಳೆ ಅವರನ್ನು ಹಿಂಬಾಲಿಸಿಕೊಂಡು ಬಂದ ಕೆಲ ದುಷ್ಕರ್ಮಿಗಳು ಅವರ ಕೈ ಕಾಲು ಕಟ್ಟಿ ಚಾಕುವಿನಿಂದ ಇರಿದಿದ್ದಾರೆ. ಕೊಲೆಯಾದ ಒಂದು ವಾರವಾದರೂ ಅಕ್ಕಪಕ್ಕದ ಮನೆಯವರಿಗೆ ಈ ವಿಷಯ ತಿಳಿದಿರಲಿಲ್ಲ. ಕಳೆದ ರಾತ್ರಿ ಸಂಜಯ್‌ ಅವರ ಫ್ಲಾಟ್‌ನಿಂದ ದುರ್ವಾಸನೆ ಬರುತ್ತಿದ್ದ ಹಿನ್ನೆಲೆಯಲ್ಲಿ ಅಕ್ಕಪಕ್ಕದವರು ಕೆ.ಆರ್‌ ಪುರಂ ಪೊಲೀಸರಿಗೆ ಮಾಹಿತಿ ನೀಡಿದ್ದರು.
ಕೂಡಲೆ ಸ್ಥಳಕ್ಕಾಗಮಿಸಿದ ಪೊಲೀಸರು, ಹಾಗೂ ಬೆರಳಚ್ಚು ತಜ್ಞರು ಪರಿಶೀಲನೆ ನಡೆಸಿದ್ದು, ತನಿಖೆ ನಡೆಸುತ್ತಿದ್ದಾರೆ. ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಬೌರಿಂಗ್‌ ಕಳುಹಿಸಲಾಗಿದ್ದು, ತನಿಖೆ ಮುಂದುವರಿದಿದೆ.

Leave a Reply

Your email address will not be published.

Social Media Auto Publish Powered By : XYZScripts.com