CWG 2018 : ವೇಟ್ ಲಿಫ್ಟಿಂಗ್ : ಚಿನ್ನ ಗೆದ್ದ ಮೀರಾಬಾಯಿ ಚಾನು, ಗುರುರಾಜ್ ಗೆ ಬೆಳ್ಳಿ ಪದಕ

ಆಸ್ಟ್ರೇಲಿಯಾದ ಗೋಲ್ಡ್ ಕೋಸ್ಟ್ ನಗರದಲ್ಲಿ ಆರಂಭಗೊಂಡ 21ನೇ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಭಾರತ ತನ್ನ ಮೊದಲ ಪದಕವನ್ನು ಪಡೆದಿದೆ. ಗುರುವಾರ ನಡೆದ ಪುರುಷರ 56 ಕೆಜಿ ವಿಭಾಗದ ವೇಟ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಭಾರತದ 25 ವರ್ಷದ ಗುರುರಾಜ್ ಪೂಜಾರಿ ಬೆಳ್ಳಿ ಪದಕವನ್ನು ಜಯಿಸಿದ್ದಾರೆ. ಮಲೇಷ್ಯದ ಮೊಹಮ್ಮದ್ ಇಝಾರ್ ಅಹ್ಮದ್ ಚಿನ್ನದ ಪದಕ ಗೆದ್ದರೆ, ಶ್ರೀಲಂಕಾದ  ಲಕ್ಮಲ್ ಚತುರಂಗ ಕಂಚಿನ ಪದಕಕ್ಕೆ ತೃಪ್ತಿ ಪಟ್ಟುಕೊಂಡರು.

ಭಾರತೀಯ ವಾಯುಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ ಗುರುರಾಜ ಅವರ ಸತತ ಪರಿಶ್ರಮಕ್ಕೆ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಪ್ರತಿಫಲ ದೊರೆತಿದೆ. ಸಾಮಾನ್ಯ ಲಾರಿ ಡ್ರೈವರ್ ಮಗನಾದ ಗುರುರಾಜ ಮೊದಲ ಕುಸ್ತಿಪಟುವಾಗಬೇಕೆಂದು ಕನಸು ಕಂಡಿದ್ದರು. ಆದರೆ ನಂತರ ತಮ್ಮ ಗುರುಗಳ ಸಲಹೆಯ ಮೇರೆಗೆ ವೇಟ್ ಲಿಫ್ಟಿಂಗ್ ಅನ್ನು ಆಯ್ದುಕೊಂಡಿದ್ದರು.

ಮಹಿಳೆಯರ 48 ಕೆ.ಜಿ ವಿಭಾಗದ ವೇಟ್ ಲಿಫ್ಟಿಂಗ್ ನಲ್ಲಿ ಭಾರತದ ಮೀರಾಬಾಯಿ ಚಾನು ಚಿನ್ನದ ಪದಕ ಗೆದ್ದಿದ್ದಾರೆ. ಮೀರಾಬಾಯಿ ಚಾನು ಗುರುವಾರ 86 ಕೆ.ಜಿ ಭಾರವನ್ನು ಎತ್ತಿ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಹೊಸ ದಾಖಲೆಯನ್ನೇ ನಿರ್ಮಿಸಿದ್ದಾರೆ.

Leave a Reply

Your email address will not be published.