ವೃದ್ಧೆಯನ್ನು ಗದ್ದೆಯಲ್ಲೇ ಎಸೆದು ಹೋದ ಮಕ್ಕಳು: ಹನಿ ನೀರಿಗಾಗಿ ರಾತ್ರಿಯಿಡೀ ನರಳಾಡಿದ ತಾಯಿ!

ಹಾವೇರಿ : ತನ್ನ ಮಕ್ಕಳು ಚೆನ್ನಾಗಿರಲಿ ಎಂದು ಚಿಕ್ಕಂದಿನಿಂದಲೂ ತಾಯಿ ಕಷ್ಟ ಪಟ್ಟು ಮಕ್ಕಳನ್ನು ಸಾಕುತ್ತಾರೆ. ಆದರೆ ಕೆಲ ಮಕ್ಕಳು ತಾಯಿ-ತಂದೆಗೆ ಕೈಲಾಗದಿದ್ದಾಗ ಬೀದಿಯಲ್ಲಿ ಎಸೆದುಹೋಗುತ್ತಾರೆ. ಅಂತಹದ್ದೇ ಘಟನೆಯೊಂದು ಹಾವೇರಿಯಲ್ಲಿ ನಡೆದಿದೆ.
ಹಾವೇರಿ ಜಿಲ್ಲೆಯ ಸಿಂಗಟಾಲೂರಿನ ನಿವಾಸಿ 90 ವರ್ಷದ ದ್ಯಾಮವ್ವ ಎಂಬುವವರನ್ನು ಮಕ್ಕಳೇ ಅಮಾನುಷವಾಗಿ ಜಮೀನಿನಲ್ಲಿ ಎಸೆದು ಹೋಗಿದ್ದಾರೆ. ಹಾವೇರಿ ನಗರದ ಹೊರವಲಯದಲ್ಲಿ ದ್ಯಾಮವ್ವ ಅವರನ್ನು ಎಸೆದುಹೋಗಿದ್ದು, ಹನಿ ನೀರೂ ಸಿಗದೆ ನಿತ್ರಾಣಗೊಂಡ ವೃದ್ಧೆ ರಾತ್ರಿಯಿಡೇ ಜಮೀನಿನಲ್ಲಿ ನರಳಾಡಿದ್ದಾರೆ.
ವೃದ್ಧೆಯನ್ನು ಕಂಡ ಸ್ಥಳೀಯರು ಆಂಬ್ಯುಲೆನ್ಸ್‌ಗೆ ಕರೆ ಮಾಡಿದ್ದು, ಕೂಡಲೆ ವೃದ್ಧೆಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಹಾವೇರಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published.

Social Media Auto Publish Powered By : XYZScripts.com