ತನ್ನ ಐದು ತಿಂಗಳ ಹಸುಗೂಸಿಗೆ ನೇಣು ಬಿಗಿದು ತಾನೂ ಸಾವಿಗೆ ಶರಣಾದ ತಾಯಿ !!

ಗದಗ : ತನ್ನ ಐದು ತಿಂಗಳ ಮಗುವಿಗೆ ನೇಣಿ ಬಿಗಿದ ಮಹಿಳೆಯೊಬ್ಬರು ತಾನೂ ನೇಣಿಗೆ ಶರಣಾಗಿರುವ ಘಟನೆ ಗದಗ ಜಿಲ್ಲೆಯಲ್ಲಿ ನಡೆದಿದೆ.
ಗದಗದ ಶ್ಯಾಗೋಟಿ ಗ್ರಾಮದ ನಿವಾಸಿ ಶೃುತಿ ಗೋವಿಂದಗೌಡ ಹಿರೇಗೌಡರ್‌ ನೇಣಿಗೆ ಶರಣಾದ ಮಹಿಳೆಯಾಗಿದ್ದು. ಬುಧವಾರ ರಾತ್ರಿ ಮನೆಯಲ್ಲಿ ಯಾರೂ ಇಲ್ಲದ ವೇಳೆ ತನ್ನ ಐದು ತಿಂಗಳ ಮಗುವಿಗೆ ನೇಣು ಹಾಕಿ ತಾನೂ ಸಾವಿಗೀಡಾಗಿದ್ದಾರೆ.
ಶೃುತಿ, ಗೇವಿಂದಗೌಡ ಹಿರೇಗೌಡ ಎಂಬುವವರನ್ನು ವಿವಾಹವಾಗಿದ್ದರು. ಆದರೆ ಗೋವಿಂದೇಗೌಡ ಬೇರೆಯವರ ಜತೆ ಅನೈತಿಕ ಸಂಬಂಧ ಇರಿಸಿಕೊಂಡಿದ್ದ. ಈ ವಿಚಾರವಾಗಿ ಇಬ್ಬರ ಮಧ್ಯೆ ಆಗಾಗ ಜಗಳ ನಡೆಯುತ್ತಿತ್ತು. ಇದರಿಂದ ಬೇಸತ್ತು ಹೋಗಿದ್ದ ಶೃುತಿ ಗಂಡನ ಮನೆ ತೊರೆದ ತನ್ನ ತವರು ಮನೆ ಸೇರಿದ್ದರು.
ಬುಧವಾರ ತನ್ನ ತಾಯಿಯ ಮನೆಯಲ್ಲೇ ಗಂಡನ ಕಿರುಕುಳದ ಬಗ್ಗೆ ಡೆತ್‌ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾರೆ.
 ಸ್ಥಳಕ್ಕೆ ಗದಗ ಗ್ರಾಮಾಂತರ ಠಾಣೆಯ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com