CWG 2018 : ವೇಟ್ ಲಿಫ್ಟಿಂಗ್ ನಲ್ಲಿ ಬೆಳ್ಳಿ ಗೆದ್ದ ಗುರುರಾಜ್ : ಪ್ರಮೋದ್ ಮಧ್ವರಾಜ್ ಅಭಿನಂದನೆ

ಉಡುಪಿ: ಕಾಮನ್‌ವೆಲ್ತ್ ಗೇಮ್ಸ್ ನಲ್ಲಿ ವೇಟ್ ಲಿಫ್ಟಿಂಗ್ ನಲ್ಲಿ ಭಾರತಕ್ಕೆ ಬೆಳ್ಳಿ ಪದಕ ತಂದು ಕೊಟ್ಟ ಗುರುರಾಜ್ ಪೂಜಾರಿಗೆ ರಾಜ್ಯ ಕ್ರೀಡಾ ಸಚಿವ ಪ್ರಮೋದ್ ಮದ್ವರಾಜ್ ವಿಶೇಷ ಅಭಿನಂದನೆ ಸಲ್ಲಿಸಿದ್ದಾರೆ.

‘ ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನ ಚಿತ್ತೂರು ಗ್ರಾಮದ ಗುರುರಾಜ್ ಇಡೀ ಭಾರತದಲ್ಲಿ ಉಡುಪಿ ಜಿಲ್ಲೆಯನ್ನು ಗುರುತಿಸುವಂತೆ ಮಾಡಿದ್ದಾರೆ. ನಮ್ಮ ದೇಶದ ಪ್ರಥಮ ಪದಕವನ್ನು ಗುರುರಾಜ್ ಪಡೆದಿದ್ದಾರೆ. ನನ್ನ ಕೈಯಿಂದಲೇ ಗುರುರಾಜ್ ಏಕಲವ್ಯ ಪ್ರಶಸ್ತಿ ಪಡೆದಿದ್ದರು.

‘ ಗುರುರಾಜ್ ಗೆ ನೇರವಾಗಿ ಗ್ರೂಪ್ ಬಿ ಹುದ್ದೆ ದೊರಕುತ್ತೆ. ರಾಜ್ಯ ಸರ್ಕಾರದಿಂದ 25 ಲಕ್ಷ ನಗದು ನೀಡಲಾಗುವುದು. ಸರ್ಕಾರದ ಆದೇಶದಂತೆ, ನಿಗದಿಪಡಿಸಿದಂತೆ ಈ ಗೌರವ ನೀಡಲಾಗುವುದು ‘ ಎಂದು ಉಡುಪಿಯಲ್ಲಿ ಸಚಿವ ಪ್ರಮೋದ್ ಮದ್ವರಾಜ್ ಹೇಳಿಕೆ ನೀಡಿದ್ದಾರೆ.

Leave a Reply

Your email address will not be published.