IPL : ಕ್ರಿಕೆಟ್ ಸೀಸನ್ ಪ್ಯಾಕ್ : ಲೈವ್ ಮ್ಯಾಚ್ ನೋಡಲು Jio ಭರ್ಜರಿ ಆಫರ್..!

ಚುಟುಕು ಕ್ರಿಕೆಟ್ ಸಮರವೆಂದೇ ಕರೆಯಲ್ಪಡುವ ಇಂಡಿಯನ್ ಪ್ರಿಮಿಯರ್ ಲೀಗ್ ನ 11ನೇ ಸೀಸನ್ ಏಪ್ರಿಲ್ 7 ಶನಿವಾರದಿಂದ ಆರಂಭಗೊಳ್ಳಲಿದೆ. ಟೂರ್ನಿ ಬಗ್ಗೆ ಕ್ರಿಕೆಟ್ ಅಭಿಮಾನಿಗಳಲ್ಲಿ ಕಾತರ, ಕುತೂಹಲ ಹೆಚ್ಚಾಗುತ್ತಿದೆ.

2 ತಿಂಗಳು ನಡೆಯಲಿರುವ ಈ ಟೂರ್ನಿಯನ್ನು ಗಮನದಲ್ಲಿರಿಸಿಕೊಂಡು ರಿಲಯನ್ಸ್ ಜಿಯೋ ನೆಟ್ವರ್ಕ್ ತನ್ನ ಗ್ರಾಹಕರಿಗಾಗಿ ಭರ್ಜರಿ ಆಫರ್ ನೀಡಲು ಮುಂದಾಗಿದೆ.

‘ ಕ್ರಿಕೆಟ್ ಸೀಸನ್ ಪ್ಯಾಕ್ ‘ ಹೆಸರಿನ ಭರ್ಜರಿ ಆಫರ್ ಅನ್ನು ತನ್ನ ಪ್ರಿಪೇಯ್ಡ್ ಗ್ರಾಹಕರಿಗಾಗಿ ಜಿಯೋ ನೆಟ್ವರ್ಕ್ ಪರಿಚಯಿಸಿದೆ. ಈ ಆಫರ್ ನಂತೆ 251 ರೂಪಾಯಿ ರೀಚಾರ್ಜ್ ಮಾಡಿಸಿದರೆ 102 ಜಿಬಿ ಡೇಟಾ ಉಪಯೋಗಿಸಬಹುದಾಗಿದೆ. 51 ದಿನಗಳ ಕಾಲ ಈ ಆಫರ್ ಇರಲಿದ್ದು, ಇಂಡಿಯನ್ ಪ್ರಿಮಿಯರ್ ಲೀಗ್ ನ ಪಂದ್ಯಗಳನ್ನು ಮೊಬೈಲ್ ನಲ್ಲಿ ಲೈವ್ ಆಗಿ ನೋಡಬಹುದಾಗಿದೆ.

Leave a Reply

Your email address will not be published.

Social Media Auto Publish Powered By : XYZScripts.com