ನಾನು ಯಾವುದೇ ರಾಜಕೀಯ ಪಕ್ಷಕ್ಕೆ ಸೇರಿದವನಲ್ಲ : ಪ್ರಕಾಶ್ ರೈ ಸ್ಪಷ್ಟನೆ

ಶಿವಮೊಗ್ಗ – ಸರಕಾರಿ ನೌಕರರ ಭವನದಲ್ಲಿ ಸಂವಾದದಲ್ಲಿ ಮಾಧ್ಯಮದವರ ಜೊತೆ ನಟ ಪ್ರಕಾಶ್ ರೈ ಮಾತನಾಡಿದ್ದಾರೆ. ‘ ನಾನು ಯಾವುದೇ ರಾಜಕೀಯ ಪಕ್ಷಕ್ಕೆ ಸೇರಿದವನಲ್ಲ. ನಾನು ಭಾರತ ದೇಶದ ಪ್ರಜೆ. ಪತ್ರಕರ್ತನ ಹಕ್ಕನ್ನು ಕಸಿದುಕೊಳ್ಳುವ ಯತ್ನ ನಡೆಸಲಾಯ್ತು. ಟಿವಿ ಕೊಂಡುಕೊಳ್ಳಬಹುದು, ಎಡಿಟರ್ ಕೊಂಡುಕೊಳ್ಳಬಹುದು, ಪತ್ರಕರ್ತರನ್ನ ಕೊಂಡುಕೊಳ್ಳಲು ಸಾಧ್ಯವಿಲ್ಲ ‘

‘ ಯಾವ ರಾಜಕೀಯ ಪಕ್ಷದಿಂದ ನಾನು ಬೆಳೆದಿಲ್ಲ. ನಮ್ಮದೇಶದಲ್ಲಿ ಕುಂಬಳಕಾಯಿ ಕಳ್ಳನನ್ನ ಹುಡುಕಬೇಕಿಲ್ಲ. ಹಾಗೆ ಹೇಳಿದ್ರೆ ಹೆಗಲು ಮುಟ್ಟಿ ನೋಡಿಕೊಳ್ಳುತ್ತಾರೆ. ಗೌರಿ ಹತ್ಯೆಯನ್ನು ವಿಜೃಂಭಿಸಿತ್ತಿದ್ದೀರಿ ಎಂದರೆ ನನ್ನ ಮೇಲೆ ತಿರುಗಿ ಬಿದ್ದಿದ್ದರು ‘

ಅನಂತಕುಮಾರ್ ಹೆಗಡೆ ವಿರುದ್ದ ವಾಗ್ದಾಳಿ ನಡೆಸಿದ ಪ್ರಕಾಶ್ ರೈ ‘ ಚುನಾವಣೆಯಲ್ಲಿ ಗೆದ್ದ ನಂತರ, ಅವರ ಸಿದ್ದಾಂತವನ್ನು ಎಲ್ಲರ ಮೇಲೆ ಏರುವ ಕೆಲಸ ಮಾಡುತ್ತಿದ್ದಾರೆ. ದಲಿತರು, ಅಲ್ಪಸಂಖ್ಯಾತರನ್ನು ಕಡೆಗಣಿಸಿದ್ದಾರೆ ಇದು ಸರಿಯಲ್ಲ. ಇದರ ಬಗ್ಗೆ ಮಾತನಾಡಿದರೇ ನನ್ನ ತಾಯಿಯ ಜಾತಿಯ ಬಗ್ಗೆ ಮಾತನಾಡುತ್ತಾರೆ.

‘ ಸುಳ್ಳುಗಳಲ್ಲಿ ಬದುಕುವ ಅವಶ್ಯಕತೆ ಇಲ್ಲ. ಸುಳ್ಳುಗಳಿಗೆ ಬಹಳ ಶಕ್ತಿ ಇದೆ, ಅದು ಎಲ್ಲರನ್ನು ನಂಬಿಸುತ್ತದೆ. 5000 ಕ್ಕೆ ನಿಮ್ಮ ಮತದಾನದ ಹಕ್ಕನ್ನು ಮಾರಿ ಕೊಳ್ಳಬೇಡಿ. ಇದರ ಬಗ್ಗೆ ನೀವು ನಾವು ಯೋಚನೆ ಮಾಡಬೇಕು. ಮೊದಲು ನಮ್ಮನ್ನ ನಾವು ಮಾರಿಕೊಳ್ಳಬಾರದು.

‘ ಆಹಾರ ಪದ್ಧತಿಯ ಬಗ್ಗೆ ಯಾಕೆ ಮಾತಾಡ್ತಾರೆ. ಪ್ರತಿಯೊಂದು ಊರಿನಲ್ಲೂ ಅವರದ್ದೇ ಆಹಾರ ಪದ್ಧತಿ ಇದೆ. ಕೆಲಸ ಕೊಡ್ತೀವಿ ಅಂದವರು ಎಲ್ಲಿ ಕೊಟ್ಟಿದ್ದಾರೆ. ಕಪ್ಪುಹಣ ತರ್ತೀವಿ ಅಂದ್ರಿ ಎಲ್ಲಿದೆ ಹಣ. ಸ್ವರಾಜ್ಯ ಅಂತೀರಾ ನಿಮ್ಮ ಪಾಲಿಸಿಯಲ್ಲೇ ಇಲ್ಲ ‘

‘ ಕೈ ಮಗ್ಗದಲ್ಲಿ ಜಿಎಸ್ ಟಿ ಹೇಗೆ ಹಾಕ್ತೀರಾ. ನಾನು ಇದನ್ನು ಪ್ರಶ್ನೆ ಮಾಡಿದ್ದೆ. ನಿಮಗೇನು ಗೊತ್ತು ಅಂತಾರೆ.‌ ಎಲೆಕ್ಷನ್ ಬಂದ್ರೆ 5 ಪರ್ಸೆಂಟ್ ಕಡಿಮೆ ಮಾಡ್ತಾರೆ. ಇದ್ಯಾವ ಸೀಮೆ ನ್ಯಾಯ. ದೊಡ್ಡ ರೋಗವನ್ನು ದೇಶದಿಂದ ತಪ್ಪಿಸಬೇಕು. ಕೋಮುವಾದ ತಪ್ಪಿಸಬೇಕು ‘ ಎಂದು ಪ್ರಧಾನಿ ವಿರುದ್ದ ಪ್ರಕಾಶ್ ರೈ ವಾಗ್ದಾಳಿ ನಡೆಸಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com