ರಿಯಲ್‌ ಲೈಫ್‌ನಲ್ಲೂ ಅಕ್ಷಯ್‌ ಹೀರೋ : ಪತ್ನಿಯ ಒಂದೇ ಒಂದು ಟ್ವೀಟ್‌ಗೆ ಇವರು ಮಾಡಿದ್ದೇನು ?

ಅಕ್ಷಯ್‌ ಕುಮಾರ್‌ ಬರಿ ಸಿನಿಮಾದಲ್ಲಿ ನಾಯಕ ಮಾತ್ರವಲ್ಲ. ನಿಜ ಜೀವನದಲ್ಲೂ ಹೀರೋ ಎಂಬುದನ್ನು ಸಾಬೀತುಪಡಿಸಿದ್ದಾರೆ. ಇತ್ತೀಚೆಗಷ್ಟೇ ಅಕ್ಷಯ್ ಪತ್ನಿ ಟ್ವಿಂಕಲ್‌ ಖನ್ನಾ ಅವರು ಮುಂಬೈನ ಜುಹು ಬೀಚ್‌ನಲ್ಲಿ ವ್ಯಕ್ತಿಯೊಬ್ಬ ಮಲ ವಿಸರ್ಜನೆ ಮಾಡುತ್ತಿರುವ ಚಿತ್ರವನ್ನು ಟ್ವೀಟ್‌ ಮಾಡಿದ್ದು, ಅದಾದ ಕೆಲ ತಿಂಗಳಲ್ಲೇ ಅಕ್ಷಯ್‌ ಅಲ್ಲಿ ಟಾಯ್ಲೆಟ್‌ ನಿರ್ಮಾಣ ಮಾಡಿದ್ದಾರೆ.
ಕಳೆದ ವಾರ ಅಕ್ಷಯ್‌ ಕುಮಾರ್‌ ಜುಬು ಬೀಚ್‌ನಲ್ಲಿ ಟಾಯ್ಲೆಟ್‌ ನಿರ್ಮಾಣ ಮಾಡಿ ಅದರ ಸಂಪೂರ್ಣ ಖರ್ಚು ವೆಚ್ಚವನ್ನು ತಾವೇ ಭರಿಸುವುದಾಗಿ ಅರ್ಜಿ ಕಳಿಸಿದ್ದರು. ಆದ್ದರಿಂದ ಜುಹು ಬೀಚ್‌ನಲ್ಲಿ ಶೌಚಾಲಯ ನಿರ್ಮಿಸಿದ್ದೇವೆ. ಇದಕ್ಕಾಗಿ 10 ಲಕ್ಷ ರೂ ಖರ್ಚಾಗಿದ್ದು ಅದನ್ನು ಅಕ್ಷಯ್‌ ಕುಮಾರ್‌ ನೀಡಿರುವುದಾಗಿ ಮುಂಬೈ ಮಹಾನಗರ ಪಾಲಿಕೆ ಅಧಿಕಾರಿ ಪ್ರಶಾಂತ್‌ ಗಾಯಕ್ವಾಡ್‌ ತಿಳಿಸಿದ್ದಾರೆ.


ಬೀಚ್‌ನಲ್ಲಿ ಮೊಬೈಲ್‌ ಟಾಯ್ಲೆಟ್‌ ನಿರ್ಮಿಸಲಾಗಿದ್ದು, ಅದನ್ನು ಉಚಿತವಾಗಿ ಬಳಸಬಹುದಾಗಿದೆ. ಅದರ ನಿರ್ವಹಣೆಗೆ ಯಾರಾದರೂ ಮುಂದಾದರೆ ಆಗ ಪಾವತಿಸಿ ಬಳಕೆ ಮಾಡುವ ವ್ಯವಸ್ಥೆ ಕಲ್ಪಿಸುವುದಾಗಿ ಹೇಳಿದ್ದಾರೆ.
ಕಳೆದ ಆಗಸ್ಟ್ ನಲ್ಲಿ ಮುಂಬೈ ಬಹಿರ್ದೆಸೆ ಮುಕ್ತ ನಗರ ಎಂದು ಘೋಷಿಸಿದ ನಂತರ ಟ್ವಿಂಕಲ್ ಖನ್ನಾ ಅವರು ಜುಹು ಬೀಚ್‌ ಬದಿಯಲ್ಲಿ ವ್ಯಕ್ತಿಯೋರ್ವ ಬಯಲು ಶೌಚ ಮಾಡುತ್ತಿರುವ ಫೋಟೋವನ್ನು ಟ್ವೀಟ್ ಮಾಡಿದ್ದರು. ಟ್ವಿಂಕಲ್ ಬೆಳಗಿನ ವಾಕಿಂಗ್ ಹೋಗಿದ್ದ ವೇಳೆ ಈ ದೃಶ್ಯವನ್ನು ತಮ್ಮ ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದರು. ಇದೇ ವೇಳೆ ಬಯಲು ಶೌಚ ಮುಕ್ತ ಕೆಲಸದ ಕುರಿತು ಟ್ವಿಟರ್‌ನಲ್ಲಿ ಬಿಸಿ ಬಿಸಿ ಚರ್ಚೆ ಕೂಡ ನಡೆಸಿದ್ದರು.
ಈಗ ಅದೇ ಬೀಚ್‌ನಲ್ಲಿ ಅಕ್ಷಯ್ ಕುಮಾರ್ ಟಾಯ್ಲೆಟ್ ಕಟ್ಟಿಸಿದ್ದು, ಮಹಿಳೆಯರಿಗೆ ಹಾಗೂ ಪುರುಷರಿಗೆ ಪ್ರತ್ಯೇಕ ಟಾಯ್ಲೆಟ್ ವ್ಯವಸ್ಥೆ ಮಾಡಲಾಗಿದೆ.

Leave a Reply

Your email address will not be published.

Social Media Auto Publish Powered By : XYZScripts.com