ಜೀನ್ಸ್ ಧರಿಸುವ ಅಮ್ಮಂದಿರಿಗೆ ಹುಟ್ಟುವ ಮಕ್ಕಳು ನಪುಂಸಕರಾಗುತ್ತಾರಂತೆ…!!!

ತಿರುವನಂತಪುರಂ : ತಾಯಂದಿರು ಜೀನ್ಸ್‌ ಧರಿಸಿದರೆ ಹುಟ್ಟುವ ಮಕ್ಕಳು ನಪುಂಸಕರಾಗುತ್ತಾರೆ ಎಂದು ಕೇರಳದ ಸ್ವಯಂ ಘೋಷಿತ ವಿದ್ಯಾರ್ಥಿ ಸಲಹಾಗಾರರೊಬ್ಬರು ಹೇಳಿಕೆ ನೀಡಿದ್ದು, ಎಲ್ಲೆಡೆ ವ್ಯಾಪಕ ಟೀಕೆಗೆ ಗುರಿಯಾಗಿದ್ದಾರೆ.

ಕಾಲಡಿ ಪ್ರದೇಶದ ಕಾಲೇಜೊಂದಕಲ್ಲಿ ಪ್ರಾಧ್ಯಾಪಕರಾಗಿರುವ ರಜಿತ್ ಕುಮಾರ್ ಎಂಬುವವರು ಈ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಶಿಕ್ಷಕನ ಈ ರೀತಿಯ ಹೇಳಿಕೆಯ ವಿರುದ್ದ ಕೇರಳ ಸರ್ಕಾರ ಕ್ರಮಕ್ಕೆ ಮುಂದಾಗಿದೆ.

ಕಾರ್ಯಕ್ರಮವೊಂದರಲ್ಲಿ ಮಕ್ಕಳು ಆಟಿಸಂ ಕಾಯಿಲೆ ಹಾಗೂ ನಪುಂಸಕರಾಗಿ ಏಕೆ ಹುಟ್ಟುತ್ತಾರೆ ಎಂಬ ಪ್ರಶ್ನೆಗೆ ಉತ್ತರಿಸಿದ್ದ ಅವರು, ಪೋಷಕರ ವಿರುದ್ದ ವರ್ತೆಯಿಂದಾಗಿ ಮಕ್ಕಳು ಆಟಿಸಂ  ಕಾಯಿಲೆಗೆ ತುತ್ತಾಗುತ್ತಾರೆ. ಮಹಿಳೆಯು ತನ್ನ ಹೆಣ್ತನವನ್ನು ಮರೆತರೆ ಹಾಗೂ ಪುರುಷರು ತನ್ನ ಪುರುಷತ್ವವನ್ನು ಮರೆತರೆ ಅವರಿಗೆ ಜನಿಸುವ ಮಗುವಿಗೆ ಈ ರೀತಿಯ ತೊಂದರೆಯುಂಟಾಗಿ ಆ ಮಗು ಆಟಿಸಂ ಕಾಯಿಲೆಗೆ ಅಥವಾ ನಪುಂಸಕನಾಗುತ್ತದೆ ಎಂದಿದ್ದಾರೆ.

ರಜಿತ್‌ ಕುಮಾರ್‌ ಇದುವರೆಗೂ ಅನೇಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ವಿದ್ಯಾರ್ಥಿಗಳಿಗೆ ಸಲಹೆ ನೀಡಿದ್ದು, ಯೂಟ್ಯೂಬ್‌ನಲ್ಲಿ ಅವರ ಭಾಷಣಗಳು ವೈರಲ್ ಆಗಿವೆ. ಅಲ್ಲದೆ 2.500 ಮಂದಿ ಇವರಿಗೆ ಫಾಲೋವರ್ಸ್‌ಗಳಿದ್ದಾರೆ ಎಂದೂ ತಿಳಿದುಬಂದಿದೆ.

Leave a Reply

Your email address will not be published.

Social Media Auto Publish Powered By : XYZScripts.com