ಕುವೆಂಪು ಬದುಕಿದ್ದರೆ ಅಮಿತ್ ಶಾರನ್ನು ಕುಪ್ಪಳ್ಳಿಗೆ ಬರಲು ಬಿಡುತ್ತಿರಲಿಲ್ಲ : ಸಿದ್ದರಾಮಯ್ಯ

ಶಿವಮೊಗ್ಗ : ಬಿಜೆಪಿ ಅಧ್ಯಕ್ಷ ಅಮಿತ್ ಶಾ ಕುಪ್ಪಳ್ಳಿಗೆ ಹೋಗಿ ಬಂದಿದ್ದಾರೆ.  ಒಂದು ವೇಳೆ ಕುವೆಂಪು ಇಂದು ಬದುಕಿರುತ್ತಿದ್ದರೆ ಅಮಿತ್ ಶಾ ಅವರನ್ನು ಅಲ್ಲಿಗೆ ಬರಲು ಬಿಡುತ್ತಿರಲಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಶಿವಮೊಗ್ಗದಲ್ಲಿ ನಡೆದ ಜನಾಶಿರ್ವಾದ ಯಾತ್ರೆ ಸಂದರ್ಭದಲ್ಲಿ ಮಾತನಾಡಿದ ಅವರು, ಕುವೆಂಪು, ಅನಂತಮೂರ್ತಿ ಅವರು ತಮ್ಮ ಸಾಹಿತ್ಯದ ಮೂಲಕ ನಮ್ಮ ನಾಡು, ಸಮಾಜ, ಎಲ್ಲವೂ ಸರ್ವ ಜನಾಂಗದ ಶಾಂತಿಯ ತೋಟ ಎಂದಿದ್ದಾರೆ. ಆದರೆ ಬಿಜೆಪಿಯವರು ಜನರ ಮಧ್ಯೆ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದಾರೆ. ಶಿವಮೊಗ್ಗದಲ್ಲೂ ಈ ಕೆಲಸ ನಡೆಯುತ್ತಿದೆ. ಹಿಂದೂ ಮುಸ್ಲೀಮರ ಮಧ್ಯೆ ತಂದಿಡುತ್ತಿದ್ದಾರೆ. ಅದನ್ನು ಬಿಟ್ಟು ಇನ್ಯಾವ ಕೆಲಸವನ್ನೂ ಮಾಡುತ್ತಿಲ್ಲ. ಇಂತಹವರು ಎಂದಿಗೂ ಅಧಿಕಾರಕ್ಕೆ ಬರಬಾರದು ಎಂದು ವಾಗ್ದಾಳಿ ನಡೆಸಿದ್ದಾರೆ.

ಶಿವಮೊಗ್ಗ ಜಿಲ್ಲೆಗೆ ತನ್ನದೇ ಆದ ಸೊಬಗಿದೆ. ಬಿಜೆಪಿಯವರು ಅದನ್ನು ಹಾಳು ಮಾಡುತ್ತಿದ್ದಾರೆ. ಕಿಡದಾಳ್ ಶ್ಯಾಮಣ್ಣ, ಬಂಗಾರಪ್ಪನಂತಹವರನ್ನು ನೋಡಿದ ಜಿಲ್ಲೆ ಇದು. ಜೆ.ಎಚ್‌ ಪಟೇಲರೂ ಜನತಾ ಪರಿವಾರದಿಂದ ಸಿಎಂ ಆಗಿದ್ದರು. ಆದರೆ ಇಂತಹ ಮಹನೀಯರಿರುವ ಜಿಲ್ಲೆಗೆ ಯಡಿಯೂರಪ್ಪನಂತಹವರು ಕಾಲಿಟ್ಟು ರಾಜಕೀಯವನ್ನು ಹಾಳು ಮಾಡುತ್ತಿರುವುದಾಗಿ ಆರೋಪಿಸಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com