ಇವ ನರ್ವ! ಇವ ನರ್ವ! ಎಂದು ರಾಹುಲ್‌ ಗಾಂಧಿಯನ್ನು ಅನುಕರಿಸಿದ್ದ ಕಲಾವಿದನ ಅಮಾನತು !

ಮಂಗಳೂರು : ಚುನಾವಣಾ ಆಯೋಗದಿಂದ ಯಕ್ಷಗಾನ ಮೇಳಕ್ಕೆ ನೋಟೀಸ್ ನೀಡಿದ ಹಿನ್ನೆಲೆಯಲ್ಲಿ ಕಟೀಲು ಯಕ್ಷಗಾನದ ಆರನೇ ಮೇಳದ ಕಲಾವಿದ ಪೂರ್ಣೇಶ್‌ ಆಚಾರ್ಯ ಅವರನ್ನು ಅಮಾನತು ಮಾಡಲಾಗಿದೆ.
ಮೂಡಬಿದ್ರೆ ಚುನವಣಾಧಿಕಾರಿ ಪ್ರಸನ್ನ ಅವರಿಂದ ನೋಟೀಸ್ ಜಾರಿ ಮಾಡಲಾಗಿದ್ದು, ಯಕ್ಷಗಾನದಲ್ಲಿ ರಾಜಕೀಯ ವಿಚಾರವನ್ನಿಟ್ಟು ಪ್ರಸ್ತಾಪ ಹಿನ್ನಲೆಯಲ್ಲಿ ನೋಟಿಸ್ ಜಾರಿ ಮಾಡಲಾಗಿದೆ.


ಯಕ್ಷಗಾನದಲ್ಲಿ ರಾಹುಲ್ ಗಾಂಧಿಯವರ ಇವ ನರ್ವ..! ಇವ ನರ್ವ..! ಇವ ನಮ್ವಾ..! ಇವ ನಮ್ವಾ..! ಎಂದಿದ್ದನ್ನು ಕಲಾವಿದ ಅನುಕರಣೆ ಮಾಡಿದ್ದರು. ರಾಹುಲ್‌ ಗಾಂಧಿಯವರು ಹೇಳಿದ್ದ ಮಾತನ್ನು ಯಕ್ಷಗಾನದ ಪ್ರಸಂಗಕ್ಕೆ ಅಳವಡಿಕೆ ಮಾಡಿ ಪ್ರದರ್ಶನ ಮಾಡುತ್ತಿತ್ತು.
ಕಟೀಲು ಮೇಳ ಧಾರ್ಮಿಕದತ್ತಿ ಇಲಾಖೆಗೆ ವ್ಯಾಪ್ತಿಗೆ ಒಳಪಡಲಿದ್ದು, ಆದ ಕಾರಣ ಚುನಾವಣಾ ಆಯೋಗದಿಂದ ನೋಟೀಸ್ ಜಾರಿ ಮಾಡಿದೆ. ಜೊತೆಗೆ ಮುಂದಿನ ಯಕ್ಷಗಾನದಲ್ಲಿ ಇದನ್ನು ಬಳಸದಂತೆ ಸೂಚಿಸಲಾಗಿದೆ.

Leave a Reply

Your email address will not be published.

Social Media Auto Publish Powered By : XYZScripts.com