ನನ್ನ ಎದುರು ರಾಮದಾಸ್‌ ನಿಂತರೂ ಚುನಾವಣಾ ಕಣದಿಂದ ಹಿಂದೆ ಸರಿಯಲ್ಲ : ಪ್ರೇಮಕುಮಾರಿ

ಮೈಸೂರು : ಮಾಜಿ ಸಚಿವ ರಾಮದಾಸ್‌ ಅವರ ಪ್ರೇಯಸಿ ಪ್ರೇಮಕುಮಾರಿ ಚುನಾವಣಾ ಅಖಾಡಕ್ಕೆ ಧುಮುಕಿದ್ದಾರೆ. ಅಗ್ರಹಾರದ ನೂರೊಂದು ಗಣಪತಿಗೆ ಪೂಜೆ ಸಲ್ಲಿಸಿ, ಮೈಸೂರಿನ ಕೆ.ಆರ್.ಕ್ಷೇತ್ರದಿಂದ ಪ್ರಚಾರ ಆರಂಭಿಸಿದ್ದಾರೆ.
ಪ್ರಚಾರದ ವೇಳೆ ಮಾತನಾಡಿದ ಪ್ರೇಮಕುಮಾರಿ, ಒಬ್ಬ ಹೆಣ್ಣು ಮಗಳಿಗೆ ಅನ್ಯಾಯವಾಗಿದೆ. ಕೆ.ಆರ್.ಕ್ಷೇತ್ರದ ಜನ ನನ್ನ ಕೈ ಹಿಡಿಯುತ್ತಾರೆಂಬ ನಂಬಿಕೆ ಇದೆ. ಎರಡು ಪುಟ್ಟ ಮಕ್ಕಳ ಬದುಕಿಗಾಗಿ ಹೋರಾಟ ಮಾಡುತ್ತಿದ್ದೇನೆ. ಕೆಲವರನ್ನು ನಂಬಿ ಸರ್ಕಾರಿ ಉದ್ಯೋಗ ಕಳೆದುಕೊಂಡು ಅನಾಥವಾಗಿದ್ದೇವೆ.‌ ನನಗೆ ಆಗಿರುವ ಅನ್ಯಾಯಕ್ಕೆ ನೀವೇ ಉತ್ತರಿಸಬೇಕಿದೆ. ರಾಮದಾಸ್ ಎದುರಿಗೆ ನಿಂತರೂ ನನಗೆ ಅಡ್ಡಿಯಿಲ್ಲ. ಯಾರೇ ನಿಂತರೂ ನಾನು ಚುನಾವಣಾ ಕಣದಿಂದ ಹಿಂದೆ ಸರಿಯಲ್ಲ ಎಂದು ರಾಮದಾಸ್‌ಗೆ ನೇರವಾಗಿಯೇ ಟಾಂಗ್‌ ನೀಡಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com