UP : ಗಂಡನ ಕಿರುಕುಳಕ್ಕೆ ಬೇಸತ್ತ ಪತ್ನಿ : ಲಟ್ಟಣಿಗೆಯಿಂದ ಹೊಡೆದು ಪತಿಯ ಕೊಲೆ..!

ಗಂಡನ ಅತಿಯಾದ ಕಿರುಕುಳಕ್ಕೆ ಬೇಸತ್ತ ಮಹಿಳೆಯೊಬ್ಬಳು ಲಟ್ಟಣಿಗೆಯಿಂದ ಹೊಡೆದು ಪತಿಯನ್ನು ಕೊಂದಿರುವ ಘಟನೆ ಉತ್ತರ ಪ್ರದೇಶದ ಅಂಬೇಡ್ಕರ್ ನಗರ ಜಿಲ್ಲೆಯಲ್ಲಿ ಸೋಮವಾರ ರಾತ್ರಿ ನಡೆದಿದೆ. ಕೊಲೆ ಮಾಡಿದ ಮಹಿಳೆ ಹಾಗೂ ಕೊಲೆಗೆ ಸಹಕರಿಸಿದ ಆಕೆಯ ಮಗಳನ್ನು ಪೋಲೀಸರು ಬಂಧಿಸಿದ್ದಾರೆ.

ಸುಮಿತ್ರಾಳ ಪತಿ ರಾಜಭರ್ ದಿನವೂ ಕುಡಿದು ಬಂದು ಪತ್ನಿಗೆ ಹೊಡೆಯುತ್ತಿದ್ದ. ಸೋಮವಾರ ರಾತ್ರಿ ಕುಡಿತದ ಚಟದ ಬಗ್ಗೆ ಗಂಡ ಹೆಂಡತಿಯ ನಡುವೆ ಜಗಳ, ವಾದ ನಡೆದಿದೆ. ಜಗಳ ತಾರಕಕ್ಕೇರಿದಾಗ ಕೋಪದ ಭರದಲ್ಲಿ ಸುಮಿತ್ರಾ ಲಟ್ಟಣಿಗೆಯಿಂದ ಗಂಡನ ತಲೆಗೆ ಹಲವಾರು ಬಾರಿ ಹೊಡೆದಿದ್ದಾಳೆ.

ಇದರಿಂದ ತೀವ್ರವಾಗಿ ಗಾಯಗೊಂಡ ಪತಿಯ ತಲೆಯಿಂದ ರಕ್ತ ಸುರಿಯಲಾರಂಭಿಸಿದೆ. ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ಕುಟುಂಬಸ್ತರು ಪತಿಯನ್ನು ಆಸ್ಪತ್ರೆಗೆ ದಾಖಲಿಸಿದರಾದರೂ ಚಿಕಿತ್ಸೆ ಫಲಕಾರಿಯಾಗದೇ ರಾಜಭರ್ ಕೊನೆಯುಸಿರೆಲೆದಿದ್ದಾನೆ.

Leave a Reply

Your email address will not be published.

Social Media Auto Publish Powered By : XYZScripts.com