ನೀತಿ ಸಂಹಿತೆಗಿಲ್ಲ ಕಿಮ್ಮತ್ತು : ಚುನಾವಣಾ ಪ್ರಚಾರಕ್ಕಾಗಿ ಚಿತ್ರನಟರ ಫೋಟೋ ಬಳಕೆ

ಕೊಪ್ಪಳ : ನಗರದಲ್ಲಿ ನೀತಿ ಸಂಹಿತೆಗೆ ಯಾವುದೇ ಕಿಮ್ಮತ್ತು ನೀಡದ ಕಾರ್ಯಕರ್ತರು, ಸಾಮಾಜಿಕ ಜಾಲತಾಣದಲ್ಲಿ ಚಲನಚಿತ್ರ‌ ನಟರ ಫೋಟೊಗಳನ್ನು ಪ್ರಚಾರಕ್ಕಾಗಿ ಬಳಕೆ ಮಾಡಿಕೊಳ್ಳುತ್ತಿದ್ದಾರೆ.
ನಾಯಕ ನಟರು ಪಕ್ಷದ ಪರ ಪ್ರಚಾರ ಮಾಡುವ ರೀತಿ ಎಡಿಟ್ ಮಾಡಿರೋ ಫೋಟೋಗಳನ್ನು ಪೋಸ್ಟ್‌ ಮಾಡಲಾಗಿದ್ದು, ಕುಷ್ಟಗಿ ವಿಧಾನಸಭೆ ಕ್ಷೇತ್ರದಲ್ಲಿ ಹೆಚ್ಚುತ್ತಿರುವ ಈ ರೀತಿಯ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.
ನಟ ಗಣೇಶ್, ಸುದೀಪ್ ಚುನಾವಣಾ ಅಭ್ಯರ್ಥಿಗಳ ಫೋಟೋ ಹಿಡಿದು ಪ್ರಚಾರ ಮಾಡಿದಂತೆ ಫೋಟೊ ಎಡಿಟ್ ಮಾಡಲಾಗಿದೆ. ಕಾಂಗ್ರೆಸ್, ಬಿಜೆಪಿ ಎರಡೂ ಪಕ್ಷದ ಕಾರ್ಯಕರ್ತರು ಈ ಕೃತ್ಯ ಎಸಗಿದ್ದು, ಈ ಬಗ್ಗೆ ಇದುವರೆಗೂ ಚುನಾವಣಾ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ತಿಳಿದುಬಂದಿದೆ.

Leave a Reply

Your email address will not be published.

Social Media Auto Publish Powered By : XYZScripts.com